ಬೆಂಗಳೂರು: ಪತಿಯೇ ಪತ್ನಿ ಹೆಸರಿನಲ್ಲಿ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆಗೆದು ಖಾಸಗಿ ಫೋಟೊ ಅಪ್ ಲೋಡ್ ಮಾಡಿರುವ ಆರೋಪ ಕೇಳಿ ಬಂದಿದೆ. ಶರವಣ್ ಕುಮಾರ್ ಎಂಬಾತನ ವಿರುದ್ಧ ಪತ್ನಿ ಗರೀಮಾ ಕುಮಾರಿ ಎಂಬುವವರು ದೂರು ನೀಡಿದ್ದಾರೆ.
ಇತ್ತೀಚೆಗೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಶರವಣ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹೀಗಿರುವಾಗ ಪತ್ನಿ ಹೆಸರಿನಲ್ಲಿ ನಕಲು ಖಾತೆ ತೆರೆದು ವೈಯಕ್ತಿಕ ಫೋಟೊ, ವಿಡಿಯೊ ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


