nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಲಿತ ವಿಷಯ ಅಂತರ್ಗತ ಮಾಡಿಕೊಳ್ಳದಿದ್ದರೆ ಅದು ವ್ಯರ್ಥ: ಡಾ.ಸಿದ್ಧರಾಜು

    May 1, 2026

    ಪಟ್ಟಣ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆ: ನಾಮಫಲಕ ಅನಾವರಣ, ಸೋಲಾರ್ ಪ್ಲಾಂಟ್ ಉದ್ಘಾಟನೆ

    May 1, 2026

    ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜು: ಉರ್ದು ಭಾಷೆ ಬೋಧಕರ ನೇಮಕಾತಿಗೆ ಮನವಿ

    May 1, 2026
    Facebook Twitter Instagram
    ಟ್ರೆಂಡಿಂಗ್
    • ಕಲಿತ ವಿಷಯ ಅಂತರ್ಗತ ಮಾಡಿಕೊಳ್ಳದಿದ್ದರೆ ಅದು ವ್ಯರ್ಥ: ಡಾ.ಸಿದ್ಧರಾಜು
    • ಪಟ್ಟಣ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆ: ನಾಮಫಲಕ ಅನಾವರಣ, ಸೋಲಾರ್ ಪ್ಲಾಂಟ್ ಉದ್ಘಾಟನೆ
    • ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜು: ಉರ್ದು ಭಾಷೆ ಬೋಧಕರ ನೇಮಕಾತಿಗೆ ಮನವಿ
    • ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಡಳಿತ ಭೇಟಿ: ತಕ್ಷಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
    • ಶಿಕ್ಷಕಿ ಡಿ.ಆರ್.ಶಿಲ್ಪಶ್ರೀ ಅವರಿಗೆ ವೀರ ರಾಣಿ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ: ನಿಸ್ವಾರ್ಥ ಸೇವೆಗೆ ವಿಜಯ ಸೇನೆಯಿಂದ ಗೌರವ
    • ಅಸಮರ್ಪಕ ವಿದ್ಯುತ್ ಸರಬರಾಜು: ರೈತರಿಂದ ಕುಣಿಗಲ್ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ
    • ತುಮಕೂರು: ಮೇ 1ರಂದು ಜಿಲ್ಲಾ ಮಟ್ಟದ ಬುದ್ಧ ಜಯಂತಿ ಆಚರಣೆ
    • ಮುಂಗಾರು ಹಂಗಾಮಿನ ಋತುಮಾನ ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪವಿತ್ರ, ಅಮರ ಮಹಾಕಾವ್ಯವನ್ನು ಜನತೆಗೆ ನೀಡಿದ ಮಹರ್ಷಿ ವಾಲ್ಮೀಕಿ: ಡಾ||ಸಿ.ಎನ್.ಅಶ್ವತ್ಥ್ ನಾರಾಯಣ್
    ರಾಜ್ಯ ಸುದ್ದಿ October 28, 2023

    ಪವಿತ್ರ, ಅಮರ ಮಹಾಕಾವ್ಯವನ್ನು ಜನತೆಗೆ ನೀಡಿದ ಮಹರ್ಷಿ ವಾಲ್ಮೀಕಿ: ಡಾ||ಸಿ.ಎನ್.ಅಶ್ವತ್ಥ್ ನಾರಾಯಣ್

    By adminOctober 28, 2023No Comments2 Mins Read
    valmeeki jayanthi

    ಬೆಂಗಳೂರು: ಮನುಷ್ಯನ ಸಾರ್ಥಕ ಬದುಕಿಗೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವು ಮಾರ್ಗದರ್ಶನ ನೀಡುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ|| ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣವು ಎಂದೆಂದೂ ಪ್ರಸ್ತುತ ಎಂದರು. ಪವಿತ್ರ, ಅಮರ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿ ಅವರು ಜನತೆಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮಹರ್ಷಿ ವಾಲ್ಮೀಕಿಯವರ ಸ್ಮರಣೆ, ಅವರಿಗೆ ಗೌರವ ನೀಡುವ ಕಾರ್ಯ ಪ್ರತಿನಿತ್ಯ, ಪ್ರತಿಕ್ಷಣವೂ ನಡೆಯಲಿ ಎಂದು ಆಶಿಸಿದರು.


    Provided by
    Provided by

    ಹಿಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸರಕಾರವೇ ಆಚರಿಸಲು ಮತ್ತು ರಜಾದಿನವಾಗಿ ಪ್ರಕಟಿಸಿದ್ದಾಗಿ ಅವರು ನೆನಪಿಸಿದರು. ಯಡಿಯೂರಪ್ಪ ಅವರು ಮತ್ತು ಅಂದಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ಈ ಗೌರವ ಸಲ್ಲುತ್ತಿದೆ ಎಂದು ವಿವರಿಸಿದರು.

    ರಾಮಾಯಣವನ್ನು ಪ್ರಶ್ನಿಸುವ, ನಂಬಿಕೆಗಳಿಗೆ ಅನುಮಾನ ಬರುವಂತೆ ಕೇಳುವ ಕಾರ್ಯ ನಡೆದಿದೆ. ಶಾಲೆಗಳಲ್ಲಿ ರಾಮಾಯಣ, ಭಗವದ್ಗೀತೆ, ಮಹಾಭಾರತದ ಕಲಿಕೆಗೆ ಅವಕಾಶವಿಲ್ಲ. ಈ ಮಹಾಕಾವ್ಯಗಳು ನಮ್ಮ ಸಂಸ್ಕøತಿ, ದೇಶದ ನಮ್ಮತನಕ್ಕೆ ಪೂರಕ. ಇವುಗಳ ಸಂಪೂರ್ಣ ತಿಳಿವಳಿಕೆ ಸಿಗಬೇಕು; ಇವುಗಳ ಮನವರಿಕೆ ಆಗಲಿ ಎಂದು ತಿಳಿಸಿದರು.

    ನಮ್ಮ ಸಂಸ್ಕøತಿಯನ್ನು ಕಡೆಗಣಿಸುವ ಕಾರ್ಯ ನಡೆದಿದೆ ಎಂದು ಬೇಸರ ಸೂಚಿಸಿದ ಅವರು, ರಾಮಾಯಣದ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ. ಧರ್ಮವನ್ನು ಅರಿಯಲು ಪ್ರಯತ್ನ ಮಾಡೋಣ ಎಂದು ತಿಳಿಸಿದರು. ನೆಚ್ಚಿನ ಪ್ರಧಾನಿ ಮೋದಿಜಿಯವರು ಮತ್ತು ಬಿಜೆಪಿಯು ಎಲ್ಲ ವರ್ಗಗಳ ಸಂಸ್ಕøತಿಯನ್ನು ತಾರತಮ್ಯವಿಲ್ಲದೆ ಎತ್ತಿಹಿಡಿಯುವ ಕಾರ್ಯ ಮಾಡುತ್ತಿವೆ ಎಂದು ವಿವರಿಸಿದರು.

    ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಎಸ್‍ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಓಲೆಕಾರ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಂಜುಂಡೇಗೌಡ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನ ಗೌಡ, ರಾಜ್ಯ ಕಟ್ಟಡ ಸಮಿತಿ ಸದಸ್ಯ ಡಾ. ಎಂ ನಾಗರಾಜ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ ನಾರಾಯಣಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಕಾರ್ಯಾಲಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    admin
    • Website

    Related Posts

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ಕುಡಿಯುವ ನೀರು: ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಲು ಆರ್. ಅಶೋಕ ಆಗ್ರಹ

    April 29, 2026

    ಅಭಿಮಾನಿಗಳಿಗೆ ಶಾಕ್ ನೀಡಿದ ರಾಕಿಂಗ್ ಸ್ಟಾರ್: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ!

    April 29, 2026

    Comments are closed.

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಲಿತ ವಿಷಯ ಅಂತರ್ಗತ ಮಾಡಿಕೊಳ್ಳದಿದ್ದರೆ ಅದು ವ್ಯರ್ಥ: ಡಾ.ಸಿದ್ಧರಾಜು

    May 1, 2026

    ತುಮಕೂರು: ವಿದ್ಯಾರ್ಥಿಗಳ ಏಕಾಗ್ರತೆಯಿಂದ ತಪಸ್ಸಿಗಾಗಿ ತಾವು ಮಾಡುವ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಯಶಸ್ವಿಯಾಗಲು ಸಾಧ್ಯ. ತಮ್ಮನ್ನು ಇತರರೊಂದಿಗೆ…

    ಪಟ್ಟಣ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆ: ನಾಮಫಲಕ ಅನಾವರಣ, ಸೋಲಾರ್ ಪ್ಲಾಂಟ್ ಉದ್ಘಾಟನೆ

    May 1, 2026

    ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜು: ಉರ್ದು ಭಾಷೆ ಬೋಧಕರ ನೇಮಕಾತಿಗೆ ಮನವಿ

    May 1, 2026

    ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಡಳಿತ ಭೇಟಿ: ತಕ್ಷಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

    May 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.