ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಡಿಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಇಲಾಖೆಯ ಶೈಕ್ಷಣಿಕ ಮಾರ್ಗದರ್ಶಿ ಅನ್ವಯ ವರ್ಷದಲ್ಲಿ ನಾಲ್ಕು ಪೋಷಕರ ಸಭೆ/ತಾಯಂದಿರ ಸಭೆ/ ಎಸ್.ಡಿ.ಎಂ.ಸಿ ಸಭೆಗಳನ್ನು ನಡೆಸುವ ಕಾರ್ಯಕ್ರಮವನ್ನು ಜಿಲ್ಲಾ ಹಂತದಲ್ಲಿ ರೂಪಿಸಲಾಗಿದೆ.
ಶೈಕ್ಷಣಿಕ ಮಾರ್ಗಸೂಚಿಯಂತೆ “ಸಮುದಾಯದತ್ತ ಶಾಲೆ”ಯನ್ನು ಪ್ರಾಥಮಿಕ ಶಾಲೆಗಳಲ್ಲಿ ದಿನಾಂಕ 30-10-2023 ರಂದು ಹಾಗೂ ಪ್ರೌಢಶಾಲೆಗಳಲ್ಲಿ 31-10-2023 ರಂದು ನಡೆಸಲು ತಿಳಿಸಿದೆ.
ಸದರಿ ಸಭೆಯಲ್ಲಿ ” ಪ್ರಭು. ಜಿ IAS, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ತುಮಕೂರು” ಇವರು “ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಮತ್ತು ಸ್ಥಳೀಯ ಸಂಸ್ಥೆಗಳ ಪಾತ್ರ” ಎಂಬ ವಿಷಯದ ಬಗ್ಗೆ ಪೋಷಕರನ್ನು ಉದ್ದೇಶಿಸಿ ಆನ್ ಲೈನ್ ಮೂಲಕ ಮಾತನಾಡಲಿದ್ದಾರೆ.
ಎಲ್ಲಾ ಪೋಷಕರು ಈ ಸಭೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಭು ಜಿ ಅವರು ಕೋರಿದ್ದಾರೆ.


