ಬೆಂಗಳೂರು: ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಗಾಗಿ ಅಳವಡಿಸಲು ಉದ್ದೇಶಿಸಲಾಗಿರುವ ಎರಡು ಮೊಬೈಲ್ ಆಕ್ಸಿಜನ್ ವಾಹನಗಳ ಕಾರ್ಯನಿರ್ವಹಣೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವೀಕ್ಷಿಸಿದರು.
500 ಎಲ್ ಪಿಎಂ ಮತ್ತು 250 ಎಲ್ ಪಿ ಎಂ ಶಕ್ತಿಯುಳ್ಳ ಮೊಬೈಲ್ ಆಕ್ಸಿಜನ್ ವಾಹನಗಳಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು 500 ಎಲ್ ಪಿ ಎಂನಿಂದ 22 ಆಕ್ಸಿಜನ್ ಸಿಲಿಂಡರ್ ಹಾಗೂ 250 ಎಲ ಪಿ ಎಂನಿಂದ 11 ಸಿಲಿಂಡರ್ ಗಳನ್ನು ಒಮ್ಮೆಲೇ ಭರ್ತಿ ಮಾಡಬಹುದಾಗಿದೆ ಎಂದರು.


