ಬೆಂಗಳೂರು: ಧಾರ್ಮಿಕ ಮೆರವಣಿಗೆ ವೇಳೆ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಆನಂದ್ ಸ್ವೀಟ್ಸ್ ಸಂಸ್ಥಾಪಕ ಆನಂದ್ ದಯಾಳ್ ದಾದು ಹಾಗೂ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿ ನಡೆದಿದೆ.
ಆನಂದ್ ದಯಾಳ್ ದಾದು, ಚಾಲಕ ಶ್ಯಾಮ್ ಸುಂದರ್ ಪಿಳ್ಳೆ ಕಾರು ನಿಲ್ಲಿಸದೆ, ರಸ್ತೆ ಬದಿಯಿಂದಲೇ ನಿಧಾನಗತಿಯಲ್ಲಿ ಕಾರು ಚಲಾಯಿಸುತ್ತಿದ್ದರು. ಇದರಿಂದ ಕುಪಿತಗೊಂಡ ಕೆಲವರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.


