ಬೆಂಗಳೂರು: ರಾಜಕೀಯದಲ್ಲಿ ಗಾಡ್ ಫಾದರ್ ಬೇಕು. ರಾಜ್ಯದ ಬಿಜೆಪಿಯಲ್ಲಿ ಕೆಲವರಿಗೆ ದುರಹಂಕಾರ ಬಂದಿರುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ನಗರದಲ್ಲಿಂದು ಮಾತನಾಡಿದ ರೇಣುಕಾಚಾರ್ಯ, ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ. ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದರು. ಪಕ್ಷ ಸೋತ ನಂತರ ಎಲ್ಲರನ್ನೂ ಕರೆದು ಮಾತಾಡಿಸಬೇಕು. ಯಡಿಯೂರಪ್ಪ ಹಿಂದೆಲ್ಲ ಆ ಕೆಲಸ ಮಾಡಿದ್ರು. ಆದರೆ ಬಿಜೆಪಿಯಲ್ಲಿ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು.
ಬೇಸತ್ತು ಹೋಗಿರುವವರು ಮುಂದೆ ಪಕ್ಷ ಬಿಡಬಹುದು. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಅಂತ ಜನ ಮಾತಾಡ್ತಿದ್ದಾರೆ. ನಾನು ಹೇಳ್ತಿಲ್ಲ, ಜನ ಹಾಗೆ ಹೇಳುತ್ತಿದ್ಧಾರೆ. ಹಲವರು ಪಕ್ಷದಲ್ಲಿ ಮಾತಾಡಲು ಭಯಪಡುತ್ತಿದ್ದಾರೆ. ಬಿಜೆಪಿಗೆ ಮಧ್ಯದಲ್ಲಿ ಯಾರು ಬಂದಿದ್ದಾರೋ ಅವರ ಆಟವೇ ಜಾಸ್ತಿ ಆಗುತ್ತಿದೆ ಎಂದರು.
ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಯಡಿಯೂರಪ್ಪ ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ. ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ಟು ಹೋಗಬಹುದು. ಮೋದಿಯವ್ರು ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿಲ್ಲ.ಮಧ್ಯದಲ್ಲಿ ಇರುವವರು ಕೆಲವರು ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದಾರೆ. ನಾನು ಯಡಿಯೂರಪ್ಪ ಗರಡಿಯಲ್ಲಿ ಬೆಳೆದವನು. ಬಿಜೆಪಿ ಬಿಡ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಸೇರುತ್ತೇನೆ ಅಂತ ಹೇಳಿಲ್ಲ. ಪಕ್ಷ ಕಟ್ಟೋಣ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾವು ಕಾದು ನೋಡುತ್ತೇವೆ.ನಾನು ಯಡಿಯೂರಪ್ಪ ಗರಡಿಯಲ್ಲಿ ಬೆಳೆದವನು. ಬಿಜೆಪಿ ಬಿಡ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಸೇರುತ್ತೇನೆ ಅಂತ ಹೇಳಿಲ್ಲ. ಪಕ್ಷ ಕಟ್ಟೋಣ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾವು ಕಾದು ನೋಡುತ್ತೇವೆ ಎಂದರು.


