ಊಟ ಸಿಗದಿದ್ರೂ ಪರವಾಗಿಲ್ಲ, ಜನರಿಗೆ ನ್ಯಾಯ ತುಂಬಾ ಅಗತ್ಯ. ಪೊಲೀಸರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ಹಹಿಸಬೇಕು ಎಂದು ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿರುವ ಪೊಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಶೇ.90ರಷ್ಟು ಒಳ್ಳೆಯ ಪೊಲೀಸರಿದ್ದಾರೆ. ಶೇಕಡಾ 10ರಷ್ಟು ಮಾತ್ರ ಕೆಟ್ಟ ಪೊಲೀಸರಿದ್ದಾರೆ. ಅಂತಹ ಸಿಬ್ಬಂದಿಯಿಂದ ಒಳ್ಳೆಯ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.


