ನೀಟ್ ಪರೀಕ್ಷೆ ಮೋದಿ ಮಾಡಿರುವ ಕಾರಣಕ್ಕೆ ವಿರೋಧಿಸುತ್ತಾರೆ. ಮೋದಿ ಏನು ಮಾಡಿದ್ರು ವಿರೋಧಿಸುವ ಮಾನಸಿಕತೆ ಅವರಿಗಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಮಹದಾಯಿ ಹಿಡಿದು ಎಲ್ಲ ವಿಷಯದಲ್ಲಿ ಕಾಂಗ್ರೆಸ್ ನಿಂದ ಅನ್ಯಾಯ ಆಗಿದೆ. ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಅಂದಿದ್ರು. ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಜನ ನಮ್ಮನ್ನು ಸೋಲಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರಬಹುದು. ರಾಷ್ಟ್ರಮಟ್ಟದಲ್ಲಿ ನಿಮಗೆ ನಾಯಕತ್ವ ಇಲ್ಲ. ಮೂರನೇ ಬಾರಿಯೂ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗೇ ಆಗಲಿದೆ ಎಂದರು.


