ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದರೆ ಕನ್ನಡ ಸಾಹಿತ್ಯದ ನಿಜವಾದ ಸಾಕ್ಷಿ ಪ್ರಜ್ಞೆ, ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.
ಶ್ರೇಷ್ಠ ಗ್ರಾಮೀಣ ಸೊಗಡಿನ ಕುಂದಾನಗರಿಯ ವರಕವಿ ಬೇಂದ್ರೆಯವರು ಜೀವನದಲ್ಲಿ ನೊಂದು, ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನ. ಜೀವನದಲ್ಲಿ ಮಕ್ಕಳ ಸಾವು, ಪತ್ನಿಯ ಸಾವು ಬೆಂದ್ರೆಯವರಿಗೆ ಅತೀವ ದುಃಖವನ್ನುಂಟು ಮಾಡಿದವು.
ಆದರೂ ಇದಾವುದಕ್ಕೂ ಧೃತಿಗೆಡದೆ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರಯವರಿಗೆ ಸಲ್ಲುತ್ತದೆ. ತಾವು ಬರೆಯುವುದಕ್ಕೂ, ಬದುಕುವುದಕ್ಕೂ ಸಂಬಂಧವೇ ಇಲ್ಲದಂತಿರುವ ಅನೇಕ ಕವಿ ಸಾಹಿತಿಗಳಿಗೆ ಬೇಂದ್ರೆಯವರ ಜೀವನ ಒಂದು ಪಾಠ. ಬೇಂದ್ರೆಯವರ ಜೀವನವೇ ಕಾವ್ಯ, ಕಾವ್ಯವೇ ಜೀವನ.


