nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!

    July 9, 2026

    ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

    July 9, 2026

    ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ

    July 9, 2026
    Facebook Twitter Instagram
    ಟ್ರೆಂಡಿಂಗ್
    • ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
    • ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
    • ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
    • ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
    • ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
    • 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
    • ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
    • ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಮಾಧಿಗಳ (ಸಕಲ ಆತ್ಮಗಳ) ಹಬ್ಬ: ಭಾರತದ ಎಲ್ಲಾ ಕ್ರೈಸ್ತರು ಆಚರಿಸುವ ಪ್ರಮುಖ ಹಬ್ಬ
    ರಾಜ್ಯ ಸುದ್ದಿ November 2, 2023

    ಸಮಾಧಿಗಳ (ಸಕಲ ಆತ್ಮಗಳ) ಹಬ್ಬ: ಭಾರತದ ಎಲ್ಲಾ ಕ್ರೈಸ್ತರು ಆಚರಿಸುವ ಪ್ರಮುಖ ಹಬ್ಬ

    By adminNovember 2, 2023No Comments2 Mins Read
    soul day

    ಭಾರತದ ಕಥೋಲಿಕ ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಸಕಲ ಆತ್ಮಗಳ ಹಬ್ಬ ಅಥವಾ ಸಮಾಧಿಗಳ ಹಬ್ಬವೆಂದು ಪ್ರತಿ ವರ್ಷ ನವೆಂಬರ್ ಎರಡರಂದು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಬನ್ನಿ ಈ ಹಬ್ಬದ ಮಹತ್ವವನ್ನು ತಿಳಿಯೋಣ.

    ಸಾಮಾನ್ಯವಾಗಿ ನಮ್ಮನ್ನಗಲಿರುವ ನಮ್ಮವರು, ಸತ್ತ ನಂತರ ನಮ್ಮಿಂದ ದೂರ ಉಳಿದಿರುವ ಆತ್ಮಗಳು, ಮತ್ತೆ ಹುಟ್ಟಿಬರುತ್ತಾರೆ ಎನ್ನುವ ನಂಬಿಕೆ ಇದೆ. ಮತ್ತೆ ಹುಟ್ಟದಿದ್ದರು ನಾವು ಅವರನ್ನು ಸೇರುತ್ತೇವೆ ಎನ್ನುವ ವಿಶ್ವಾಸ ಮಾತ್ರ ಇನ್ನು ಉಳಿದಿದೆ. ಹೀಗೆ ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶೇಷ ಆಚರಣೆಯೊಂದು ಮಾಡುತ್ತಾರೆ .ಅದುವೇ ಸಮಾಧಿಗಳ ಹಬ್ಬ ಅಥವಾ ಆಲ್ ಸೋಲ್ಸ್ ಡೇ. ಈ ದಿನದ ವಿಶೇಷದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

    ಸಮಾಧಿ ಹಬ್ಬ: ಸತ್ತಾಗ ಸಮಾಧಿಗೆ ಹೂವಿನ ಅಲಂಕಾರ ಮಾಡುವುದು ಸಹಜ. ಜೊತೆಗೆ ಮಹಾಲಯ ಅಮಾವಾಸ್ಯೆ ದಿನ ಮೃತರ ಸಮಾಧಿಗೆ ಪೂಜೆ ಮಾಡಿ ಬರುವುದು ಹಿಂದೂ ಸಂಪ್ರದಾಯ ಹಾಗೂ ನಂಬಿಕೆ.

    ಆದರೆ ಇಡೀ ಸ್ಮಶಾನಕ್ಕೆ ಅಲಂಕಾರ ಮಾಡಿ, ಸಮಾಧಿಗಳನ್ನು ಸಿಂಗಾರ ಮಾಡಿ ಪೂಜೆ ಮಾಡುವ ವಿಶಿಷ್ಟ ಸಂಪ್ರಯದಾಯ ಕೂಡ ಇದೆ.ಅದು ಕ್ರೈಸ್ತ ಧರ್ಮದಲ್ಲಿ ಒಂದು ವಾಡಿಕೆಯಾಗಿದೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸಮಾಧಿ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಹಿರಿಯರು, ತಂದೆ, ತಾಯಿ, ಸೋದರ, ಸೋದರಿಯರು ಹೀಗೆ ನಮ್ಮನ್ನಗಲಿದ ರಕ್ತ ಸಂಬಂಧಿಗಳ ಆತ್ಮಗಳಿಗೆ ಪೂಜೆ ಮಾಡುವ ಈ ದಿನವನ್ನು ಸಕಲ ಆತ್ಮಗಳ ದಿನ ಎಂದು ಪ್ರಮುಖವಾಗಿ ಆಚರಣೆ ಮಾಡೋದು ಕ್ರಿಶ್ಚಿಯನ್ ಸಮುದಾಯ.

    ಕ್ರಿಶ್ಚಿಯನ್ ಧರ್ಮದಲ್ಲಿ ಸ್ಮಶಾನಗಳಲ್ಲಿ ತಮ್ಮ ಕುಟುಂಬಗಳಲ್ಲಿ ಮೃತರಾದವರನ್ನು ಒಂದೇ ಸಮಾಧಿಗಳಲ್ಲಿ ಹಾಕಿ ಅಂತ್ಯಸಂಸ್ಕಾರ ಮಾಡೋದು ಪದ್ದತಿ. ಒಂದು ತಲೆ ಮಾರಿನ ಜನರಿಗೆ ಒಂದರಂತೆ ಸಮಾಧಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವರು ಸತ್ತಾಗ ಅವರನ್ನು ಅದೇ ಸಮಾಧಿಗಳಲ್ಲಿ ಹಾಕಲಾಗುತ್ತದೆ.

    ಹೀಗೆ ಮಾಡಿ ಪ್ರತಿ ವರ್ಷ ಅವರ ಆತ್ಮಗಳಿಗೆ ಪೂಜೆ ಮಾಡುವ ಸಲುವಾಗಿ ಸ್ಮಶಾನ ಹಬ್ಬ ಎಂದು ಆಚರಣೆ ಮಾಡುತ್ತಾರೆ ಎಂದು ಫಾದರ್ ಹೇಳಿದ್ದಾರೆ. ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಎನ್ನುವ ನಂಬಿಕೆ ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲಿ ಇರುವಂತೆ ಸತ್ತವರು ಮತ್ತೆ ಜೀವಕ್ಕೆ ಎಬ್ಬಿಸಲ್ಪಡುತ್ತಾರೆ ಎನ್ನುವ ನಂಬಿಕೆಯನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಬಲವಾಗಿ ನಂಬಲಾಗುತ್ತದೆ.

    ಈ ಸಲುವಾಗಿ ಸಮಾಧಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಹಾಗೆ ಮೃತರ ಆತ್ಮಗಳಿಗೆ ಪೂಜೆ ಸಲ್ಲಿಸಿ, ಬಲಿಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಈ ದಿನದಂದು ಕುಟುಂಬದ ಎಲ್ಲಾ ಸದಸ್ಯರು ಒಂದೆಡೆ ಸೇರಿ ಸಮಾಧಿಗಳಿಗೆ ಬಗೆ ಬಗೆಯಾಗಿ ಅಲಂಕಾರ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾರೆ.

    ಇನ್ನು ಸಮಾಧಿ ಹಬ್ಬವನ್ನು ಇಲ್ಲಿ ಬಹಳ ಪ್ರಾಮುಖ್ಯತೆ ಹಾಗೂ ಅತೀವ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಈ ದಿನದಂದು ಕುಟುಂಬಕ್ಕೆ ಸೇರಿದ ಎಲ್ಲರೂ ಕಡ್ಡಾಯವಾಗಿ ಇಲ್ಲಿಗೆ ಬಂದು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ.

    ಎಷ್ಟೇ ದೂರದ ಊರುಗಳಲ್ಲಿ ಅಥವಾ ಯಾವುದೇ ದೇಶಗಳಲ್ಲಿ ಇರಲಿ ಕಡ್ಡಾಯವಾಗಿ ಬಂದೇ ಬರುತ್ತಾರೆ. ಎಷ್ಟೋ ಬಾರಿ ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಕೂಡಾ ಈ ದಿನಗಳಲ್ಲಿ ಸ್ಮಶಾನ ಪೂಜೆಗೆ ಬರುತ್ತಾರೆ.

    ಒಟ್ಟಾರೆ ಮನುಷ್ಯ ಸತ್ತ ಮೇಲೆ ಅವನ ಆತ್ಮ ಸಾಯುವುದಿಲ್ಲ ಎನ್ನುವ ಮಾತಿದೆ.ಸಾವು ಪ್ರತಿಯೊಬ್ಬರಿಗೂ ಬರುತ್ತೆ ಸತ್ತವರನ್ನು ನೆನದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.

    ಓ ಕರ್ತರೇ ಮೃತರಿಗೆ ನಿತ್ಯ ವಿಶ್ರಾಂತಿಯನ್ನು ದಯಪಾಲಿಸಲಿ. ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ ಆಮೆನ್. ಮಣ್ಣು ನೀನು ಮೆರೆಯ ಬೇಡಾ ಮನುಜ. ಮಣ್ಣಾಗಿ ಹೋಗುವೆ ಮರೆಯದಿರು.

    ವರದಿ: ಆಂಟೋನಿ ಬೇಗೂರು


    Provided by
    Provided by
    admin
    • Website

    Related Posts

    ವಾಸ್ತವ ವರದಿ ಪರಿಶೀಲನೆ ಬಳಿಕವೇ ಬರ ಘೋಷಣೆ ಮತ್ತು ಪರಿಹಾರ ವಿತರಣೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

    July 7, 2026

    ಮಂಗಳಮುಖಿ ವೇಷ ಧರಿಸಿ ದಂಧೆ ನಡೆಸ್ತಿದ್ದ ನಟೋರಿಯಸ್ ಪಿಂಪ್ ಪೊಲೀಸರ ವಶಕ್ಕೆ

    July 7, 2026

    ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ

    July 3, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!

    July 9, 2026

    ಕೆಲವೊಮ್ಮೆ ತೀವ್ರವಾದ ಮಸಾಜ್ ಮಾಡಿಸಿಕೊಳ್ಳುವಾಗ, ಮೈತುಂಬಾ ಹಚ್ಚೆ (Tattoos) ಹಾಕಿಸಿಕೊಳ್ಳುವಾಗ ಅಥವಾ ಕಠಿಣವಾದ ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಉಂಟಾಗುವ ನೋವಿನಲ್ಲಿ ಕೆಲವರು…

    ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

    July 9, 2026

    ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ

    July 9, 2026

    ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ

    July 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.