ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಅವಮಾನಿಸಿ ಪೋಸ್ಟ್ ಹಾಕಿದ್ದಾರೆ. ಎಂಬ ಆರೋಪದಡಿ ಬೆಳಗಾವಿ ಜಿಲ್ಲೆ ಸವದತ್ತಿಯ ರತನ್ ಸನಾತನಿ ಎಂಬುವರ ವಿರುದ್ಧ ಎಚ್ ಎಸ್‌ಆರ್ ಬಡಾವಣೆ ಸೈಬರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಆರೋಪಿ, ನಾಥರಾಂ ಗೋಡ್ರೆ ಫೋಟೊ ಬಳಸಿ ಗಾಂಧೀಜಿ ಅವಮಾನಿಸಿದ್ದಾರೆ ಎಂದು ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡ ಅನಿಲ್ ರೆಡ್ಡಿ ದೂರು ನೀಡಿದ್ದರು.
‘ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ನಡೆಸಿದ್ದಾರೆ. ಅವರ ಬರಹ ಕೋಮು ಗಲಭೆಗೆ ಪ್ರಚೋದನಕಾರಿ ಆಗಿದೆ. ರತನ್ ಸನಾತನಿ ಅವರನ್ನು ಬಂಧಿಸಬೇಕು’ ಎಂದು ಕೋರಿದ್ದಾರೆ.


