ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಳ್ಳಾರಿ ರಸ್ತೆಯ ಬಿಎಸ್ ಎಫ್ ಗೇಟ್-2ರ ಮುಂಭಾಗ ನಡೆದಿದೆ. ಬಿಎಸ್ ಎಫ್ ಯೋಧ ಸುಧಾಕರ್ (41) ಹಾಗೂ ಕೋಲಾರ ಮೂಲದ ಗಿರೀಶ್ (ಗಣಿ) (32) ಮೃತರು.
ಬಿಎಸ್ ಎಫ್ ಯೋಧ ಸುಧಾಕರ್ ಗೇಟ್-2ರ ಮೂಲಕ ಸರ್ವಿಸ್ ರಸ್ತೆಗೆ ಬಂದು ಬಾಗಲೂರು ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ಮುಖ್ಯರಸ್ತೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಎರಡೂ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.


