ಬೆಂಗಳೂರು: ಆರ್ಗಾನಿಕ್ ಚೀಲದ ಹೆಸರಲ್ಲಿ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪದ ಮೇಲೆ ಎನ್ವಿ ಗ್ರೀನ್ ಕಂಪೆನಿ ಮಾಲೀಕನ ವಿರುದ್ಧ ಎಫ್‌ಐಆ ದಾಖಲು ಮಾಡಲಾಗಿದೆ.
ಎನ್ವಿ ಗ್ರೀನ್ ಮಾಲೀಕ ಅಶ್ವತ್ ಹೆಗ್ಡೆ ವಿರುದ್ಧ ಈಗ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಶ್ವಥ್ ಹೆಗ್ಡೆ ವಿರುದ್ಧ ಉದ್ಯಮಿ ನಿಲಿಮಾ ಅವರು ದೂರು ನೀಡಿದ್ದಾರೆ.
ಪ್ಲಾಸ್ಟಿಕ್ ಬದಲು ಆರ್ಗಾನಿಕ್ ಬ್ಯಾಗ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದ ಅಶ್ವತ್ ಹೆಗ್ಡೆ ಈ ಬಗ್ಗೆ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿದ್ದರು.


