ಬೆಂಗಳೂರು: ಬೆಂಗಳೂರಿನ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ರಾಜ್ಯೋತ್ಸವದ ದಿನ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ.
ಅರಣ್ಯ ಅಧಿಕಾರಿಗಳು ಹೊಡೆದ ಗುಂಡು ಚಿರತೆಯ ಮರಣಕ್ಕೆ ಕಾರಣವಾಗಿದ್ದು ಸ್ವತಃ ಅರಣ್ಯ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ.
ಚಿರತೆ ಸಾವಿಗೀಡಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನ ಚಿರತೆಗಾಗಿ ನೋವಿನಿಂದ ಬರೆದುಕೊಳ್ಳುತ್ತಿದ್ದಾರೆ. ಕೆಲವರಂತೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.


