ಮಂಗಳೂರು: ಗೆಳತಿ ಔಟಿಂಗ್ ಬರಲಿಲ್ಲ ಎಂದು ಕೋಪಗೊಂಡ ಪಾಗಲ್ ಪ್ರೇಮಿ, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬುವವರ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಗುರುವಾರ ಸಂಜೆ ಔಟಿಂಗ್ ಗೆ ಬರುವಂತೆ ಯುವತಿಗೆ ಕರೆ ಮಾಡಿದ್ದಾನೆ.
ಆದರೆ, ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ ನನ್ನು ಹಿಡಿದು ಥಳಿಸಿದ್ದಾರೆ.


