ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ತಯಾರು ಮಾಡ್ತಿದ್ದ ಕಾರ್ಖಾನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ ಬ್ರಾಂಡ್ ಬಟ್ಟೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಸುಮಾರು 1.50 ಕೋಟಿ ಮೌಲ್ಯದ ಜನಪ್ರಿಯ ಬ್ರಾಂಡ್ ಗಳಾದ ಲೆವಿಸ್, ಲ್ಯಾಕೋಸ್ಟ್, ಆರ್ ಎಲ್–ಪೋಲೊ, ಗ್ಯಾಂಟ್, ಪೆಪೆ ಜೀನ್ಸ್ ಮತ್ತು ಯುಎಸ್ ಪೋಲೋಗಳ 6,500 ನಕಲಿ ಉಡುಪುಗಳನ್ನು ವಶಪಡಿಸಿಕೊಂಡಿದ್ದಾರೆ.


