ಸಲಾರ್ ಚಿತ್ರ, ಶ್ರೀಮುರುಳಿ ಅಭಿನಯದ ಉಗ್ರಂ ಚಿತ್ರದ ರಿಮೇಕ್ ಎಂಬ ವಿಚಾರವನ್ನು ಸಂಗೀತ್ ನಿರ್ದೇಶಕ ರವಿ ಬಸೂರು ಈ ಹಿಂದೆಯೇ ಒಪ್ಪಿಕೊಂಡಿದ್ದರು.
‘ಸಲಾರ್‘ ಸೆಟ್ಟೇರಿದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿ ಬಸೂರು ಅವರಿಗೆ ‘ಇದು ಉಗ್ರಂ ರಿಮೇಕಾ‘ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ನೇರವಾಗಿ ಉತ್ತರಿಸಿದ್ದ ರವಿ ಬನ್ನೂರು, ‘ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ರಿಮೇಕ್ ಆದರೂ ಇವರು ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿದೆ‘ ಎಂದಿದ್ದರು. ಟ್ರೇಲರ್ ನೋಡಿದ ಅನೇಕರು ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾರೆ.


