ಬೆಂಗಳೂರು: ತನ್ನ ಸೆಲ್ ಫೋನ್ ಒಡೆದ ಎಂಬ ಕಾರಣಕ್ಕೆ ಪತಿಯ ಮೇಲೆ ಸೇಡು ತೀರಿಸಿಕೊಳ್ಳಲು ಪತಿಯ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಸಂದೇಶ ಕಳುಹಿಸಿದ 32 ವರ್ಷದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿದ್ಯಾರಾಣಿ (36) ಬಂಧಿತ ಮಹಿಳೆಯಾಗಿದ್ದು, ಆಕೆ ಬಿಹಾರದ ಮೂಲದವನ ಪರಿಚಯವಾಗಿ ಸ್ನೇಹ ಮೂಡಿತ್ತು.
ಈ ವಿಚಾರವಾಗಿ ಗಂಡ-ಹೆಂಡತಿ ಜಗಳ ನಡೆದಾಗ ಪತಿ ಸಿಟ್ಟಿಗೆದ್ದು ಮೊಬೈಲ್ ಹೊಡೆದು ಹಾಕಿದ್ದ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪತ್ನಿ ತನ್ನ ಸ್ನೇಹಿತನ ಜತೆಗೂಡಿ ಉಪಾಯ ಮಾಡಿದ್ದರು ಎನ್ನಲಾಗಿದೆ.


