ಕಲಬುರಗಿ: ರಾಯಚೂರಿನಿಂದ ಕಲಬುರಗಿಗೆ ಆಗಮಿಸುತ್ತಿದ್ದಾಗ, ನಗರದ ಜಿಲ್ಲಾ ಕಾರಾಗೃಹದ ಬಳಿ ಕೆಕೆಆರ್ ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ. ತಿಪ್ಪಣ್ಣ ಇಜೇರಿ(30), ರಾಜೇದ್ರ ಇಜೇರಿ(20) ಅವರು ಮೃತ ದುರ್ದೈವಿಗಳಾಗಿದ್ದಾರೆ.
ಈ ವೇಳೆ ರಾಣಪ್ಪ ಕಟ್ಟಿಮನಿ ಖಣದಾಳ ಎಂಬುವವರಿಗೆ ಗಂಭೀರ ಗಾಯವಾದರೆ, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮೂವರಿಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


