ಪುಣೆ: ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮೊಟ್ಟೆ ಕದ್ದಿದ್ದಾರೆ ಎಂದು ಆರೋಪಿಸಿ ಆಕೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆದಿದೆ. ಪುಣೆ ನಗರದ ಹೋಟೆಲ್ ಪಾರ್ಕ್ ಆರ್ನೇಟ್ನ ಅಡುಗೆಯವರು ಇದನ್ನು ಮಾಡಿದ್ದಾರೆ. ಆರೋಪಿಯ ಹೆಸರು ಮುಖೇಶ್ ಸಿಂಗ್ ಪುಂಡಿಲ್. ಆತನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಪುಣೆ ನಗರದ ಹೋಟೆಲ್ ಪಾರ್ಕ್ ಆರ್ನೇಟ್ ನ ಅಡುಗೆಯವರು ಮಾಡಿದ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಯರವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


