nammatumakuru

    Subscribe to Updates

    Get the latest creative news from FooBar about art, design and business.

    What's Hot

    9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು

    July 11, 2026

    ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

    July 11, 2026

    ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ

    July 11, 2026
    Facebook Twitter Instagram
    ಟ್ರೆಂಡಿಂಗ್
    • 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
    • ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
    • ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
    • ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    • ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
    • ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
    • ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
    • ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗೀತೆಯ ಸಂದೇಶ ಹಂಚುವ ಕಾರ್ಯ ಶ್ಲಾಘನೀಯ: ಡಾ. ಪ್ರಭಾಕರ ಕೋರೆ
    ರಾಜ್ಯ ಸುದ್ದಿ December 19, 2023

    ಗೀತೆಯ ಸಂದೇಶ ಹಂಚುವ ಕಾರ್ಯ ಶ್ಲಾಘನೀಯ: ಡಾ. ಪ್ರಭಾಕರ ಕೋರೆ

    By adminDecember 19, 2023No Comments2 Mins Read
    belagavi 2

    ಬೆಳಗಾವಿ: ಗೀತೆಯ ಸಂದೇಶವನ್ನು ಸಮಸ್ತ ಜನತೆಗೆ ತಲುಪಿಸುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಾರ್ಯ ಶ್ಲಾಘನೀಯ ಎಂದು ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಭಗವದ್ಗೀತೆ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ.

    ಸೋಮವಾರ ಇಲ್ಲಿಯ ಗುರುದೇವ ರಾನಡೆ ಮಂದಿರದಲ್ಲಿ, ಭಗವದ್ಗೀತೆ ಅಭಿಯಾನ ಸಮಿತಿ, ಜನಕಲ್ಯಾಣ ಟ್ರಸ್ಟ್ ಹಾಗೂ ಎಸಿಪಿಆರ್ ಸಹಯೋಗದಲ್ಲಿ ನಡೆದ ಗೀತಾ ಸಮನ್ವಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನಿಸ್ವಾರ್ಥದಿಂದ ಮೂಲ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಅತ್ಯಂತ ಸ್ತುತ್ಯಾರ್ಹ. ಬೆಳಗಾವಿಯಲ್ಲಿ ಭಗವದ್ಗೀತೆ ಅಭಿಯಾನ ನಡೆಸುತ್ತಿರುವುದು ಬಹಳ ದೊಡ್ಡ ಕೆಲಸ ಎಂದ ಕೋರೆ, ಡಿ.23ರಂದು ನಡೆಯಲಿರುವ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನತೆ ಭಾಗವಹಿಸಲಿದ್ದಾರೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಭಗವದ್ಗೀತೆಯ ತತ್ವದ ಅಡಿಯಲ್ಲಿ ಎಲ್ಲ ಸಿದ್ಧಾಂತಗಳನ್ನು ಒಂದೇ ಕಡೆ ತರುವ ಪ್ರಯತ್ನದ ಭಾಗವಾಗಿ ಗೀತಾ ಸಮನ್ವಯ ನಡೆಸಲಾಗುತ್ತಿದೆ ಎಂದರು. ಎಲ್ಲದಕ್ಕೂ ಅದರದ್ದೇ ಆದ ಸ್ಥಾನ ಇರಬೇಕು. ಆದರೆ ಅವೆಲ್ಲದರ ಮಧ್ಯೆ ಹೊಂದಾಣಿಕೆ ಇರಬೇಕು. ಅದೇ ಸಮನ್ವಯ ಎಂದರು.

    ತತ್ವ ಶಾಸ್ತ್ರಗಳಲ್ಲಿ ಕೂಡ ಪರಸ್ಪರ ಹೊಂದಾಣಿಕೆ ಇರುತ್ತದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತತ್ವಗಳ ಮೇಲೆ ಇಲ್ಲಿ ವಿಷಯ ಮಂಡನೆ ನಡೆಯುತ್ತದೆ. ಈ ಮೂರೂ ಪ್ರಕಾರದ ಚಿಂತನೆಗಳಲ್ಲಿ ಹೊಂದಾಣಿಕೆ ಇರುತ್ತದೆ. ಆ ಕುರಿತ ಚರ್ಚೆಯೇ ಗೀತಾ ಸಮನ್ವಯ ಎಂದು ಶ್ರೀಗಳು ಹೇಳಿದರು. ಎಲ್ಲರಿಗೂ ಅವರವರ ಮತಗಳ ಬಗ್ಗೆ ಗೌರವ ಇರಬೇಕು. ಆದರೆ ಬೇರೆ ಮತಗಳ ಬಗ್ಗೆಯೂ ಗೌರವ, ಸಮನ್ವಯ ಇರಬೇಕು ಎಂದೂ ಶ್ರೀಗಳು ಹೇಳಿದರು.

    ನಂತರ ಸಂಜೆಯವರಗೂ ವಿವಿಧ ಗೋಷ್ಠಿಗಳು ನಡೆದವು. ಭಗವದ್ಗೀತೆ ಮತ್ತು ಶರಣ ಸಾಹಿತ್ಯ ಕುರಿತು ನಿವೃತ್ತ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ, ಆಳ್ವಾರ್ ಸಾಹಿತ್ಯ ಕುರಿತು ಮೈಸೂರು ಸಂಸ್ಕೃತ ಕಾಲೇಜಿನ ಡಾ.ಎಂ.ಆನಂದ, ಭಗವದ್ಗೀತೆ ಮತ್ತು ದಾಸ ಸಾಹಿತ್ಯ ಕುರಿತು ಇಸ್ಕಾನ್ ನ ನಾಗೇಂದ್ರ ದಾಸ ಹಾಗೂ ಪಂಡಿತ ಶ್ರೀನಿಧಿ ಆಚಾರ್ ಜಮ್ನೀಸ್, ಭಗವದ್ಗೀತೆ ಮತ್ತು ರಾಮಕೃಷ್ಣ- ವಿವೇಕಾನಂದ ಸಾಹಿತ್ಯ ಕುರಿತು ರಾಮಕೃಷ್ಣ ಆಶ್ರಮದ ಶ್ರೀ ನಿತ್ಯಸ್ಥಾನಂದ ಸ್ವಾಮಿಗಳು ಮತ್ತು ಶ್ರೀ ಕ್ಷೇತ್ರ ಶಕಟಪುರದ ಮಧುಸೂದನ್ ಶಾಸ್ತ್ರೀ ಹಂಪಿಹೊಳಿ ವಿಷಯಗಳನ್ನು ಮಂಡಿಸಿದರು. ಮೈಸೂರಿನ ಭಾರತೀ ಯೋಗಧಾಮದ ಯೋಗ ರತ್ನ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಸಮಾರೋಪ ಭಾಷಣ ಮಾಡಿದರು.

    ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ವಿದ್ವಾನ್ ಸೂರ್ಯ ನಾರಾಯಣ ಭಟ್, ಎಸಿಪಿಆರ್ ಗೌರವ ಕಾರ್ಯದರ್ಶಿ ಎಂ.ಬಿ. ಜಿರಲಿ, ರಾಮ ಭಂಡಾರಿ, ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸೀತಾರಾಮ ಭಾಗವತ, ಶ್ರೀಧರ ಗುಮ್ಮಾನಿ, ವೆಂಕಟ್ರಮಣ ಹೆಗಡೆ, ಗಣೇಶ ಹೆಗಡೆ, ಅರುಣ ನಾಯ್ಕ್, ಸುಬ್ರಹ್ಮಣ್ಯ ಹೆಗಡೆ, ಸಿ.ಜಿ.ಶಾಸ್ತ್ರಿ, ಶ್ರೀಪಾದ ಭಟ್, ವಿನಾಯಕ ಹೆಗಡೆ ಮೊದಲಾದವರಿದ್ದರು.

    ಅಭಿಯಾನ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಹಾಗೂ ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಮಾತೆಯರಿಂದ ಭಗವದ್ಗೀತೆ ಪಠಣ ನಡೆಯಿತು.


    Provided by
    Provided by
    admin
    • Website

    Related Posts

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ವಾಸ್ತವ ವರದಿ ಪರಿಶೀಲನೆ ಬಳಿಕವೇ ಬರ ಘೋಷಣೆ ಮತ್ತು ಪರಿಹಾರ ವಿತರಣೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

    July 7, 2026

    ಮಂಗಳಮುಖಿ ವೇಷ ಧರಿಸಿ ದಂಧೆ ನಡೆಸ್ತಿದ್ದ ನಟೋರಿಯಸ್ ಪಿಂಪ್ ಪೊಲೀಸರ ವಶಕ್ಕೆ

    July 7, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು

    July 11, 2026

    ತಿಪಟೂರು: ಕೇವಲ 9.50 (ಒಂಭತ್ತುವರೆ) ರೂಪಾಯಿಗೋಸ್ಕರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಎಸ್ಬಿಐ ವ್ಯವಸ್ಥಾಪಕರು ರೈತನಿಗೆ ನೋಟಿಸ್ ನೀಡಿ,…

    ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

    July 11, 2026

    ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ

    July 11, 2026

    ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    July 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.