ಟಿಕೆಟ್ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವ ಸಂಬಂಧ, ಕೆಎಸ್ ಆರ್ ಟಿಸಿ ಡಿಪೊ ವ್ಯವಸ್ಥಾಪಕ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವ್ಯಾಪಾರಿ ಜಿ. ರಾಘವೇಂದ್ರ ದೂರು ನೀಡಿದವರಾಗಿದ್ದಾರೆ. ಕೆಎಸ್ ಆರ್ ಟಿಸಿ 2 ಡಿಪೊ ವ್ಯವಸ್ಥಾಪಕ ಮತ್ತು ಅದೇ ಟರ್ಮಿನಲ್ ಭದ್ರತಾ ಸಿಬ್ಬಂದಿ ಸತೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಟಿಕೆಟ್ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ 2 ಡಿಪೊ ವ್ಯವಸ್ಥಾಪಕ ಮತ್ತು ಅದೇ ಟರ್ಮಿನಲ್ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿ, ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.


