nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ

    May 5, 2026

    ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ

    May 5, 2026
    Facebook Twitter Instagram
    ಟ್ರೆಂಡಿಂಗ್
    • ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    • ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ
    • ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ
    • ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ
    • ಸರ್ಕಾರಿ ಶಾಲೆ ಉಳಿಸುವ ಸಂಕಲ್ಪದೊಂದಿಗೆ: ಮಕ್ಕಳ ಬೇಸಿಗೆ ಶಿಬಿರ
    • ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು, ಓರ್ವನ ಸ್ಥಿತಿ ಗಂಭೀರ
    • ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ
    • ಮೊಬೈಲ್ ರಿಪೇರಿ, ಸರ್ವಿಸ್ ತರಬೇತಿಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮದ್ಯ ಮಾರಾಟಕ್ಕೆ 6 ವರ್ಷದ ಮಗುವಿನ ಬಳಕೆ: ಗ್ರಾಮದ ಯಜಮಾನರ ವಿರುದ್ಧ ದೂರು
    ರಾಜ್ಯ ಸುದ್ದಿ December 28, 2023

    ಮದ್ಯ ಮಾರಾಟಕ್ಕೆ 6 ವರ್ಷದ ಮಗುವಿನ ಬಳಕೆ: ಗ್ರಾಮದ ಯಜಮಾನರ ವಿರುದ್ಧ ದೂರು

    By adminDecember 28, 2023No Comments2 Mins Read
    child

    ಮೈಸೂರು ತಾಲ್ಲೂಕು ವರುಣ ಹೋಬಳಿ ಸರ್ಕಾರಿ ಉತ್ತನಹಳ್ಳಿಯ ಅಂಬೇಡ್ಕರ್ ಬೀದಿಯಲ್ಲಿ 6 ವರ್ಷದ ಮಗು ಮದ್ಯ ಮಾರಾಟದಲ್ಲಿ ತೊಡಗಿದ್ದು ಇದಕ್ಕೆ ಸಹಕರಿಸುತ್ತಿರುವ, ಗ್ರಾಮದ ಕೆಲವು ಯಜಮಾನರು ಮುಖಂಡರ ಸಹಿತ ಸದರಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ  ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ , ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ರವೀಂದ್ರ ಎಂ. ಅವರು ದೂರು ಸಲ್ಲಿಸಿದ್ದಾರೆ.

    ಈ ಕುರಿತು ದೂರು ಸಲ್ಲಿಸಿರುವ ಎಂ.ರವೀಂದ್ರ, ಉತ್ತನಹಳ್ಳಿಯ ನಿವಾಸಿಯಾದ ನಾನು ಮೈಸೂರು ತಾಲೂಕಿನ ಎಸ್ ಉತ್ತನಹಳ್ಳಿ ಗ್ರಾಮದ ಮನೆಯಲ್ಲಿ, ಬಾಲಕಾರ್ಮಿಕನು ಮದ್ಯ ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದ ಎಂಬುದಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡಿ ಮಕ್ಕಳ ಸಹಾಯವಾಣಿ 1098 ಇಲ್ಲಿಗೆ ಕರೆ ಮಾಡಿ ತಿಳಿಸಿರುತ್ತೇನೆ. ಸದರಿಯವರ ನಿರ್ದೇಶನದಂತೆ ಮೈಸೂರಿನ DCPU ರವರಿಗೆ ಸಹ ಈ ಬಗ್ಗೆ ತಿಳಿಸಿ, ಅವರ ಸೂಚನೆ ಮೇರೆಗೆ ಮೊಬೈಲ್ ಸಂಖ್ಯೆ 8951069897 ಇಲ್ಲಿಗೆ ಹಾಗೂ DCPU ರವರ 9972505030 ಮೊಬೈಲಿಗೆ ವಾಟ್ಸಪ್ ಮೂಲಕ ನನ್ನ ಮೊಬೈಲ್ 9449886677 ಸಂಖ್ಯೆ ಇಂದ ವಿಡಿಯೋ ರವಾನಿಸಿರುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಪತ್ರ ಸಂಖ್ಯೆ: ಸಕಾಆಮೈ/ಬಾಕಾಯೋ/2022-23 ದಿನಾಂಕ 22/12/2022 ಇಲ್ಲಿನ ಪತ್ರದಲ್ಲಿರುವಂತೆ ಕಡತ ನಿರ್ವಹಣೆಯಾಗಿರುವುದು ಸರಿ ಅಷ್ಟೇ.


    Provided by
    Provided by

    ಈ ಬಗ್ಗೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ಸಾರ್ವಜನಿಕವಾಗಿ ಅವಮಾನಿಸಿದ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾನು ನೀಡಿದ ದೂರಿಗೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ 172/2022 ದಾಖಲಾಗಿರುತ್ತದೆ. ಆದರೆ ಸದರಿ ಮಗುವಿನ ಬಗ್ಗೆ ಮಾಹಿತಿ ನೀಡಬಾರದೆಂದು ನಮ್ಮ ಗ್ರಾಮದ ಯಜಮಾನರು ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಲು ನಿರಾಕರಿಸುತ್ತಾರೆ.

    ಈ ಎಲ್ಲವನ್ನು ಗಮನಿಸಿದರೆ ಈ ರೀತಿ ಮಗುವಿನ ಕೈಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೂ ನಮ್ಮ ಗ್ರಾಮದ ಯಜಮಾನರಿಗೂ ನಿಕಟ ಸಂಬಂಧವಿರುವ ಅನುಮಾನವಿರುತ್ತದೆ. ಈ ಮಗು ಚಿಕ್ಕ ವಯಸ್ಸಿನಲ್ಲಿ ಈ ರೀತಿಯಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡರೆ ನಾವು ಹೇಗೆ ತಾನೇ ಸತ್ಪ್ರಜೆಗಳನ್ನು ನಿರ್ಮಿಸಲು ಸಾಧ್ಯ? ಮತ್ತು ಈ ರೀತಿಯಾಗಿ ಮಗು ಮದ್ಯ ಮಾರಾಟದಲ್ಲಿ ತೊಡಗಿಕೊಂಡಿರುವ ಬಗ್ಗೆ, ಮಾಹಿತಿ ನೀಡದಿರುವುದು ಸಹ ಕ್ರಿಮಿನಲ್ ಅಪರಾಧವೇ ಆಗಿರುವುದರಿಂದ ದಯಮಾಡಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಕ್ರಮ ಕೈಗೊಂಡು, ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡದ ಹಿರಿಯ ಕಾರ್ಮಿಕ ನಿರೀಕ್ಷಕರು 2ನೇ ವೃತ್ತ ಮೈಸೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಬೇಕೆಂದು ದೂರಿನಲ್ಲಿ ರವೀಂದ್ರ  ಎಂ. ಮನವಿ ಮಾಡಿದ್ದಾರೆ.

    admin
    • Website

    Related Posts

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ

    May 5, 2026

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದ ಹಾದಿಯಲ್ಲೇ ಈಗ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮತದಾರರು ಕೂಡ…

    ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ

    May 5, 2026

    ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ

    May 5, 2026

    ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ

    May 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.