ಗೋವಾದಿಂದ ಅಕ್ರಮವಾಗಿ ಕಲಬುರಗಿಗೆ ಮದ್ಯ ಸಾಗಿಸುತ್ತಿದ್ದ ವೇಳೆ ಖಾಸಗಿ ಬಸ್ ಮೇಲೆ ಕಲಬುರಗಿ ಜಿಲ್ಲಾ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಇದರೊಂದಿಗೆ 51 ಲಕ್ಷ ರೂ. ಮೌಲ್ಯದ ಒಂದು ಖಾಸಗಿ ಬಸ್ ಹಾಗೂ 2 ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೇ 6 ಜನರನ್ನ ಬಂಧಿಸಿದ್ದಾರೆ
ಪಣಜಿಯಿಂದ ಬರುತ್ತಿದ್ದ ಖಾಸಗಿ ಬಸ್ ನ ವಿವಿಧೆಡೆ ಮದ್ಯದ ಬಾಟಲಿಗಳನ್ನ ಇಡಲಾಗಿತ್ತು. ಬಸ್ ಕಲಬುರಗಿ ಗಡಿಗೆ ಎಂಟ್ರಿ ಕೊಡುತ್ತಿದ್ದಂತೆ ಅಲರ್ಟ್ ಆದ ಕಲಬುರಗಿ ಅಬಕಾರಿ ಪೊಲೀಸರು, ಇಡೀ ಬಸ್ ಜಾಲಾಡಿದ್ದಾರೆ. ಈ ವೇಳೆ ನೂರಾರು ಬಾಟಲ್ ಗಳು ಅಬಕಾರಿ ಪೊಲೀಸರ ಕೈಗೆ ಸಿಕ್ಕಿವೆ.
ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ. ಹೀಗಾಗಿ ನ್ಯೂ ಇಯರ್ ಸೆಲಬ್ರೇಷನ್ ಗಾಗಿ ಈ ಎರಡು ರಾಜ್ಯದ ಅಗ್ಗದ ಮದ್ಯಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಅದಕ್ಕಾಗಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.


