ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದೆ. ಹೀಗಾಗಿ ಬಿಜೆಪಿಯವರು ಯತ್ನಾಳ್ ವಿರುದ್ದ ಶಿಸ್ತುಕ್ರಮ ಜರುಗಿಸುತ್ತಿಲ್ಲ ಅನ್ನಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಲೇವಡಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ. ಯತ್ನಾಳ್ ಕಾಂಗ್ರೆಸ್ ನ ಏಜೆಂಟ್ ಅಲ್ಲ. ಯತ್ನಾಳ್ ಹಿಂದಿನಿಂದಲೂ ಹೇಳುತ್ತಾ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿ ಬಿಜೆಪಿ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಯತ್ನಾಳ್ ಬಳಿ ಎಲ್ಲಾ ದಾಖಲೆ ಇದ್ದಿರಬಹುದು. ಹೀಗಾಗಿ ಬಿಜೆಪಿಗೆ ಯತ್ನಾಳ್ ಕಂಡರೇ ಭಯ. ಯತ್ನಾಳ್ ಆರೋಪದ ಬಗ್ಗೆ ಸರ್ಕಾರವೂ ತನಿಖೆ ನಡೆಸುತ್ತದೆ. ಗುತ್ತಿಗೆದಾರ, ಅಸೋಸಿಯೇಷನ್ ಆರೋಪ ಸೇರಿ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.


