ತುಮಕೂರು: ಶುಕ್ರವಾರ ನಮಾಜ್ ಬಳಿಕ ಎಸ್ ಎಸ್ ಎಲ್ ಸಿ ಪೂರ್ವ ತಯಾರಿ ಪರೀಕ್ಷೆಗೆ ಹಾಜರಾಗಲು ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂರು ಅಷ್ಟೇ ಅಲ್ಲಾ ಓಟ್ ಹಾಕಿರೋದು, ಹಿಂದೂಗಳು ಕೂಡ ಓಟ್ ಹಾಕಿದ್ದಾರೆ. ಅವರ ಅನುಕೂಲಕ್ಕೆ ಯಾವ ಕಾರ್ಯಕ್ರಮ ಬೇಕಾದರೂ ರೂಪಿಸ್ತಾರೆ ಎಂದು ಮಾಜಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಾಗಾದ್ರೇ ಕರ್ನಾಟಕ ರಾಜ್ಯದಲ್ಲಿ ಹಿಂದೂಗಳು ಇಲ್ಲಾ ಅನ್ನೋದು ಅವರ ಭಾವನೆ ಉಂಟಾಗಿದೆ. ಈ ಚುನಾವಣೆಯಲ್ಲಿ ಗೊತ್ತಾಗುತ್ತೆ ಹಿಂದೂಗಳು ಯಾವ ತೀರ್ಮಾನ ತೆಗೆದುಕೊಳ್ತಾರೆ ಅಂತ ಎಂದು ಹೇಳಿದರು.
ಮುಸ್ಲಿಂನ್ನ ಓಲೈಸಿ,ಹಿಂದೂಗಳನ್ನ ಕಾಲಕಸಕ್ಕಿಂತ ಕೀಳಾಗಿ ನೋಡ್ತಿದ್ದಾರೆ. ಈ ಚುನಾವಣೆಯಲ್ಲಿ ಹಿಂದೂಗಳು ಕಾಂಗ್ರೆಸ್ ಗೆ ಬುದ್ದಿಯನ್ನ ಕಲಿಸ್ತಾರೆ ಎಂದರು.
ಕಾಂಗ್ರೆಸ್ ಪ್ರಧಾನಿ ಇದ್ದಾಗ ರಾಜ್ಯಕ್ಕೆ ಏನು ಆನುದಾನ ಕೊಟ್ಟಿದ್ದಾರೆ. ಮೋದಿ ಅವರು ಪ್ರಧಾನಿಯಾದ ಬಳಿಕ ಯಾವ ರೀತಿ ನಡೆದುಕೊಂಡಿದ್ದಾರೆ ಎಲ್ಲಾ ದಾಖಲೆಗಳು ಇದೆ. ಇಡೀ ರಾಜ್ಯದಲ್ಲಿ ಬರಗಾಲ ಆದರೂ ರೈತರಿಗೆ ಸಹಾಯ ಮಾಡುವಂತಾ ಔದಾರ್ಯತೆ ಸಿಎಂ ತೋರುತ್ತಿಲ್ಲ ಎಂದು ಟೀಕಿಸಿದರು.
ಅದೇ ಮುಸ್ಲಿಂ ಸಮುದಾಯ ಅಂದ್ರೇ 10 ಸಾವಿರ ಕೋಟಿ ಅಂತಾ ಓಲೈಕೆ ಮಾಡ್ತಾರಲ್ಲ. ಅದೇ 10 ಸಾವಿರ ಕೋಟಿಯನ್ನ ರೈತರಿಗೆ ಕೊಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರೈತರನ್ನ ಉಳಿಸಬೇಕಲ್ಲ. ರೈತರ ಸಂಕಷ್ಟದ ಮಧ್ಯೆ ಒಂದು ಸಮುದಾಯದ ಓಲೈಕೆಯನ್ನ ಶ್ರೀರಾಮ ಚಂದ್ರನೂ ಮೆಚ್ಚೋದಿಲ್ಲ ಎಂದರು.