ಕಲಬುರಗಿ: ಕಲಬುರಗಿ ಆಶ್ರಯ ಕಾಲೊನಿಯಲ್ಲಿ ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದ್ದು, ಕಲಬುರಗಿ ಆಶ್ರಯ ಕಾಲೊನಿ ನಿವಾಸಿಯಾಗಿರುವ ರೋಹನ್(22) ಕೊಲೆಯಾದ ಯುವಕನಾಗಿದ್ದಾನೆ.
ಕಲಬುರಗಿ ನಗರದ ಏಷ್ಯನ್ ಮಾಲ್ ನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೋಹನ್‌ನನ್ನು ಒಬ್ಬ ರೌಡಿ ಶೀಟರ್ ಮಂಗಳವಾರ ರಾತ್ರಿ ಆಶ್ರಯ ಕಾಲೋನಿಯಲ್ಲಿ ಕೊಲೆ ಮಾಡಿದ್ದಾನೆ. ಆರೋಪಿಯು, ಮಹಾರಾಷ್ಟ್ರದ ಪುಣೆಯಿಂದ ಗಡಿಪಾರಾಗಿ ಬಂದಿದ್ದ ರೌಡಿ ಶೀಟರ್ ರೋಹನ್ ಜತೆಗೆ ಯಾವುದೋ ಕಾರಣಕ್ಕೆ ದ್ವೇಷವನ್ನು ಹೊಂದಿದ್ದ ಎನ್ನಲಾಗಿದೆ. ಇದರಿಂದಾಗಿ ಆತ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


