ಕೋಯಿಕ್ಕೋಡ್: ಕೇರಳದ ಕೋಝಿಕೋಡ್ ನ ವೆಸ್ಟ್ ಹಿಲ್ ನಲ್ಲಿರುವ ಕೊನ್ನಾಡ್ ಕಡಲ ಕಿನಾರೆಗೆ ಫೆಬ್ರವರಿ 8ರಂದು ಬಿಜೆಪಿ ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದುಕೊಂಡು ಬಂದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿದ್ದಾರೆ.
ಈ ರೀತಿ ಪೊರಕೆ ಹಿಡಿದು ಓಡಿಸುವುದನ್ನು ಬಿಜೆಪಿ ನಾಯಕಿ, ಡ್ರಗ್ಸ್ ಮತ್ತು ಅನೈತಿಕ ಚಟುವಟಿಕೆಗಳ ವಿರುದ್ಧ “ಜಾಗೃತಿ ಅಭಿಯಾನ” ಎಂದು ಹೇಳಿದ್ದಾರೆ. ಸಮವಸ್ತ್ರದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ನಿಯಮಿತವಾಗಿ ಬೀಚ್ ಗೆ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಮಹಿಳಾ ಪ್ರತಿಭಟನಾಕಾರರು ಬೀಚ್ ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ವ್ಯಕ್ತಿಯ ಬಳಿಗೆ ಬಂದು ಯಾವುದೇ ಕೆಟ್ಟ ನಡವಳಿಕೆಯನ್ನು ಕಂಡರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಅಂದಹಾಗೆ, ಆ ಸಮಯದಲ್ಲಿ ಕೆಲವೇ ಜನರಿದ್ದರು ”ಎಂದು ಪೊಲೀಸರು ಹೇಳಿದ್ದಾರೆ. ಇದರ ಮಧ್ಯೆ ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೂ ನೈತಿಕ ಪೊಲೀಸ್ ಗಿರಿ ಮುಂದುವರಿಸುವುದಾಗಿ ಮಾಲಿನಿ ಎಚ್ಚರಿಸಿದ್ದಾರೆ.


