ಜಮ್ಮು-ಕಾಶ್ಮೀರದಲ್ಲಿ ಮನೆಗೆ ಬೆಂಕಿ ತಗುಲಿ ಮೂವರು ಸಹೋದರಿಯರು ಸಜೀವ ದಹನವಾಗಿದ್ದಾರೆ. ರಾಂಬನ್ ಜಿಲ್ಲೆಯ ಧನ್ಮಸ್ತ-ತಜ್ನಿಹಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ಮೂರು ಅಂತಸ್ತಿನ ಮನೆಗೆ ಬೆಂಕಿ ಕಾಣಿಸಿಕೊಂಡಿದೆ.
ಮೃತರನ್ನು ಬಿಸ್ಮಾ (18), ಸೈಕಾ (14) ಮತ್ತು ಸಾನಿಯಾ (11) ಎಂದು ಗುರುತಿಸಲಾಗಿದೆ. ಸಹೋದರಿಯರು ಮಹಡಿಯ ಮೇಲೆ ಮಲಗಿದ್ದರು. ಬೆಂಕಿ ವ್ಯಾಪಿಸಿದ ನಂತರ ಅವರು ಮನೆಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆದಿದ್ದಾರೆ. ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


