ಇಂದಿನಿಂದ ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯವಾಗಿದೆ. ಆದೇಶ ಪಾಲಿಸದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ನಿರ್ಧಾರ ಪ್ರಕಟವಾದ ನಂತರ ವಿವಿಧೆಡೆಯಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾದವು. ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹಲವು ಮುಸ್ಲಿಂ ಸಂಘಟನೆಗಳು ರಾಜಸ್ಥಾನ ನ್ಯಾಯಾಲಯದ ಮೊರೆ ಹೋಗಿವೆ.
ಜಮೀಯತ್ ಉಲೇಮಾ ಹಿಂದ್ ನ ರಾಜ್ಯ ಕಾರ್ಯಕಾರಿಣಿ ಕೂಡ ಸರ್ಕಾರದ ಆದೇಶವನ್ನು ಬಹಿಷ್ಕರಿಸುವಂತೆ ಕರೆ ನೀಡಿತು. ಮುಸ್ಲಿಂ ಸಂಘಟನೆಗಳು ಸೂರ್ಯನನ್ನು ದೇವರಂತೆ ನೋಡುವುದಿಲ್ಲ ಮತ್ತು ಸೂರ್ಯನನ್ನು ಪೂಜಿಸುವುದು ತಮ್ಮ ಧರ್ಮದಲ್ಲಿ ಅನುಮತಿಸುವುದಿಲ್ಲ ಎಂದು ವಾದಿಸುತ್ತಾರೆ.


