ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಕ್ಕೂ ತೊಂದರೆ ಅಲ್ಲದೆ ಒಳಗಿರುವ ಇನ್ನಿತರ ಪ್ರಮುಖ ಅಂಗಾಂಗ ಗಳಿಗೂ ಸಮಸ್ಯೆ! ಆದರೆ ಈ ಸಮಸ್ಯೆಯಿಂದ ದೂರವಿರಬೇಕು ಎಂದರೆ, ಇಂತಹ ಹಣ್ಣುಗಳನ್ನು ಸೇವನೆ ಮಾಡಬೇಕು.
ನೆನೆಸಿಟ್ಟ ಬಾದಾಮಿ: ಬಾದಾಮಿ ಬೀಜಗಳನ್ನು ಪ್ರತಿದಿನ ನೆನೆ ಸಿಟ್ಟು ನಾಲ್ಕೈದು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆ ಯಲ್ಲಿ ಸೇವನೆ ಮಾಡುವುದರಿಂದ ಹೃದಯಕ್ಕೆ ತುಂಬಾ ಒಳ್ಳೆ ಯದು ಎಂದು ಹೇಳುತ್ತಾರೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಲ್ಲದು. ಇದರಿಂದ ಹೃದಯದ ಮೇಲಿನ ಒತ್ತಡವೂ ಕೂಡ ಕಡಿಮೆಯಾ ಗುತ್ತದೆ ತನ್ಮೂಲಕ ಹೃದಯದ ಕ್ಷಮತೆ ಮತ್ತು ಆರೋಗ್ಯ ಎರಡೂ ಹೆಚ್ಚುತ್ತವೆ.
ಖರ್ಜೂರ: ನೈಸರ್ಗಿಕ ಸಿಹಿ ಅಂಶಗಳನ್ನು ಒಳಗೊಂಡಿರುವ ಖರ್ಜೂರ ಗಳನ್ನು ಹಸಿಯಾಗಿ ಸೇವನೆ ಮಾಡಬಹುದು, ಇಲ್ಲಾಂದ್ರೆ ಒಣ ಖರ್ಜೂರಗಳನ್ನು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುವ ಅಭ್ಯಾಸ ಮಾಡಿ ಕೊಂಡರೆ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಕ್ಕಂತೆ ಆಗುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನಾರಿನಾಂಶ, ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ಕರುಳಿನ ಚಲನೆಯನ್ನು ಉತ್ತಮ ಪಡಿಸು ವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ದೂರವಾಗಿ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಮುಂತಾದ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತವೆ.
ಸೀಬೆಹಣ್ಣು: ಈ ಹಣ್ಣಿನಲ್ಲಿ ಸಿಗುವ ಅಧಿಕ ಪ್ರಮಾಣದ ಪೊಟ್ಯಾಶಿಯಮ್, ಕರಗುವ ನಾರಿನಾಂಶ ಹಾಗೂ ವಿಟಮಿನ್ ಸಿ ಅಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ದಿನಕ್ಕೊಂದು ಸೀಬೆ ಹಣ್ಣನ್ನು ಸೇವನೆ ಮಾಡುತ್ತಾ ಬರುವುದರಿಂದ, ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು, ನಿಯಂತ್ರಣಕ್ಕೆ ಬರುವುದು ಎಂದು ಸಂಶೋಧನೆಗಳು ಕೂಡ ಕಂಡುಕೊಂಡಿವೆ.
ಸೇಬು: ವಿಶೇಷವಾಗಿ ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಕಂಡು ಬರುವುದರಿಂದ, ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ವನ್ನು ಕಾಪಾಡಲು ನೆರವಿಗೆ ಬರುತ್ತದೆ.
ಬೆಣ್ಣೆ ಹಣ್ಣು: ಅವಕಾಡೊ ಅಥವಾ ಬೆಣ್ಣೆ ಹಣ್ಣಿನಲ್ಲಿ ಒಳ್ಳೆಯ ಪ್ರಮಾಣದ ಕೊಬ್ಬಿನಾಂಶ, ಅಧಿಕ ಪ್ರಮಾಣದ ನಾರಿನಾಂಶ, ಹಲವಾರು ಬಗೆಯ ವಿಟಮಿನ್ ಗಳು, ಖನಿಜಾಂಶಗಳು ಹಾಗೂ ಪ್ರಬಲ ಆಂಟಿಆಕ್ಸಿಡೆಂಟ್ ಅಂಶಗಳು ಕಂಡು ಬರುತ್ತದೆ.
ಪ್ರಮುಖವಾಗಿ ಈ ಹಣ್ಣಿನಲ್ಲಿ ಏಕಪರ್ಯಾಪ್ತ ಕೊಬ್ಬಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಕೆಟ್ಟ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುವುದು.


