ಮೊಳಕೆಯೊಡೆದ ಕಡಲೆ ಕಾಳು ತಿಂದರೆ ಈ ಎಲ್ಲಾ ಸಮಸ್ಯೆಗಳು ದೂರ..!
ಮೊಳಕೆಯೊಡೆದ ಕಡಲೆಯಲ್ಲಿ ಫೈಬರ್ & ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ನಾರಿನಂಶದಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇದು ಮೆಗ್ನಿಸಿಯಮ್, ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ವಿಟಮಿನ್ ಎ, ಬಿ 6, ಸತು ಮತ್ತು ಮ್ಯಾಂಗನೀಸ್ ನಂತಹ ಖನಿಜಗಳನ್ನು ಒಳಗೊಂಡಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗುತ್ತವೆ. ಇದು ಮ್ಯಾಂಗನೀಸ್ ಅನ್ನು ಹೊಂದಿದ್ದು ಇದು ಚರ್ಮದ ಸುಕ್ಕು ಮತ್ತು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತವೆ.
ಜ್ವರದ ಸಮಯದಲ್ಲಿ ಇವುಗಳಿಂದ ದೂರವಿರಿ
ಜ್ವರ ತುಂಬಾ ಸಾಮಾನ್ಯವಾಗಿದೆ. ಹವಾಮಾನದಲ್ಲಿ ಬದಲಾವಣೆಯಾದಾಗ, ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾದಾಗ, ಕೆಮ್ಮು ಮತ್ತು ಶೀತದಂತಹ ವಿವಿಧ ಕಾರಣಗಳಿಂದ ಜ್ವರ ಬರುತ್ತದೆ. ಈ ವೇಳೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜ್ವರ ಬಂದಾಗ ಬಹಳಷ್ಟು ಜನರು ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಆದರೆ ಈ ಸಮಯದಲ್ಲಿ ಇವುಗಳನ್ನು ಕುಡಿಯಬಾರದು. ಏಕೆಂದರೆ ಅವು ನಿಮ್ಮ ನಿದ್ದೆಯನ್ನು ಕೆಡಿಸುತ್ತವೆ. ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಆದ್ದರಿಂದ ತೆಂಗಿನ ನೀರು ಮತ್ತು ಹಣ್ಣಿನ ರಸವನ್ನು ಕುಡಿಯಿರಿ.
ಈ ಹಣ್ಣಿನ ಬೀಜ ತಿನ್ನುವ ಮುನ್ನ ಎಚ್ಚರ.!
ಬೇಸಿಗೆಯಲ್ಲಿ ಬರುವ ಲಿಚಿ ಹಣ್ಣು ನೈಸರ್ಗಿಕವಾಗಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದರ ಬೀಜಗಳು ಮಾತ್ರ ನಮ್ಮ ದೇಹಕ್ಕೆ ಹಾನಿಕಾರಕ. ಇದು ದೇಹಕ್ಕೆ ವಿಷಕಾರಿ ಎಂದು ಹೇಳಲಾಗುತ್ತದೆ. ಸಂಶೋಧನೆಯ ಪ್ರಕಾರ, ಇದರಲ್ಲಿರುವ ಕೆಲವು ಅಮೈನೋ ಆಮ್ಲಗಳು ನಮ್ಮ ರಕ್ತದಲ್ಲಿನ ಗ್ಲಕೋಸ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಮೆದುಳಿನ ಉರಿಯೂತಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗಿದೆ. ಆದ್ದರಿಂದ ಲಿಚಿ ಹಣ್ಣಿನ ಬೀಜಗಳನ್ನು ತಪ್ಪಿಸಿ.
ಕರಿಬೇವಿನ ನೀರು ಕುಡಿದರೆ ಆರೋಗ್ಯಕ್ಕಿದೆ ಬಹಳಷ್ಟು ಪ್ರಯೋಜನ!
ಚೆನ್ನಾಗಿ ತೊಳೆದ ಕೆಲವು ಕರಿಬೇವಿನ ಎಲೆಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ಆ ಸೊಪ್ಪುಗಳನ್ನು ಕೊಂಚ ಕಿವುಚಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಮಾತ್ರವೇ ಕುಡಿದರೆ ಸಾಕು. ಅದಿಲ್ಲದಿದ್ದರೆ, ಬೆಳಗ್ಗೆ ಬಿಸಿ ನೀರಿನಲ್ಲಿ ಕರಿಬೇವಿನ ಎಲೆಗಳನ್ನು ಕೆಲಕಾಲ ನೆನೆಸಿಟ್ಟು, ಆ ನೀರನ್ನು ಸೋಸಿ ಕುಡಿದರೆ ಸಾಕಷ್ಟು ಉಪಯೋಗಳಿವೆ. ಈ ನೀರಿನಲ್ಲಿ ಹಲವು ರೀತಿಯ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಇದು ಕೂದಲಿನ ಬುಡವನ್ನು ಭದ್ರಪಡಿಸಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ!
ಬಿಳಿ ಹಲ್ಲುಗಳು ನಮ್ಮನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಎರಡು ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ಉಪ್ಪಿನೊಂದಿಗೆ ನಿಧಾನವಾಗಿ ಉಜ್ಜಿದರೆ ಅದು ಫಲಿತಾಂಶವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ತೊಳೆದ ನಂತರ ಒಂದು ಚಮಚ ತೆಂಗಿನೆಣ್ಣೆಯೊಂದಿಗೆ ಗಾರ್ಗ್ಲಿಂಗ್ ಮಾಡುವುದು ಬ್ಯಾಕ್ಟಿರಿಯಾ ಮತ್ತು ಕುಳಿಗಳನ್ನು ಕಡಿಮೆ ಮಾಡುತ್ತದೆ. ಬೇಕಿಂಗ್ ಸೋಡಾವನ್ನು ಪೇಸ್ಟ್ ಆಗಿ ಬಳಸುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


