ಟ್ಯಾಟೂ ಅಂದರೆ ಹೆಚ್ಚಿನವರು ಇಷ್ಟ ಪಡುತ್ತಾರೆ.ಸಾಮಾನ್ಯವಾಗಿ ಹದಿಹರೆಯದವರಲ್ಲಿ ಈ ಗೀಳು ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಕೈ, ಕಾಲು, ಎದೆ, ಬೆನ್ನಿನ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳೋದನ್ನು ನಾವು ನೋಡಿದ್ದೇವೆ. ಆದರೆ ಇದೀಗ ಇಲ್ಲೊಬ್ಬಳು ಯುವತಿ ಎಲ್ಲಿ ಹಾಕಿಸಿ ಕೊಂಡಿದ್ದಾಳೆ ಗೊತ್ತಾ?
ಹೌದು, ಈ ವಿಡಿಯೋ ನೋಡಿದ್ರೆ ನಿಮ್ಗೂ ಶಾಕ್ ಆಗೋದು ಗ್ಯಾರಂಟಿ.. ಮನುಷ್ಯನಿಗೆ ಹುಚ್ಚು ಇರಬೇಕು ಆದರೆ ಈ ರೀತಿಯ ಹುಚ್ಚುಗಳು ಇರಬಾರದು ಎಂದು ಅಂದುಕೊಳ್ಳೋದಂತು ಪಕ್ಕಾ..
ಈ ಯುವತಿ ಒಸಡಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು, ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಕಂಡು ಯುವತಿಯ ಟ್ಯಾಟೂ ಹುಚ್ಚಿಗೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.ಇದು ಯಾವ ಚಂದಕ್ಕಾಗಿ ಅಲ್ಲಿ ಹಾಕಿಸಿಕೊಂಡಿದ್ದಾಳೋ ಏನೋ..ಒಟ್ಟಿನಲ್ಲಿ ಇವಳ ಈ ನಡೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ.

@liyanhai33 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಕಂಡಿದೆ. ವಿಡಿಯೋದಲ್ಲಿ ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವುದನ್ನು ಕಾಣಬಹುದು.
ಮಾರ್ಚ್ 4ರಂದು ಅಪ್ಲೋಡ್ ಮಾಡಲಾದ ಈ ವಿಡಿಯೋಗೆ 6,471 ಜನರು ಲೈಕ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಏಕೆ ಹಾಳು ಮಾಡುತ್ತಿದ್ದೀರಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


