ತುರುವೇಕೆರೆ: ಇಡೀ ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿರುವಂತಹ ವಿಧಾನ ಪರಿಷತ್ ಚುನಾವಣೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಆದರೆ, 12 ಗಂಟೆಯಾದರೂ ಮಣೆಚೆಂಡೂರು ಗ್ರಾಮ ಪಂಚಾಯ್ತಿಯಲ್ಲಿನ ಒಂದು ಮತ ಬಿಟ್ಟರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ, ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಮತ್ತು ಮಾಯಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಇನ್ನೂ ಕೂಡ ಒಂದು ಮತವೂ ಆಗಿಲ್ಲ.
ಪಂಚಾಯ್ತಿ ಸಿಬ್ಬಂದಿಗಳು, ಆರಕ್ಷಕರು ಮತ್ತು ಆಶಾಕಾರ್ಯಕರ್ತೆಯರು ಕೋವಿಡ್ ಸುರಕ್ಷಾ ಕ್ರಮಗಳನ್ನು ಕೈಗೊಂಡು ಬೆಳ್ಳಂಬೆಳಗ್ಗೆಯೇ ಪಂಚಾಯ್ತಿಯಲ್ಲಿ ಶಿಸ್ತಿನಿಂದ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಮಾತ್ರ ಮತದಾನ ಮಾಡಲು ಇನ್ನೂ ಯಾಕೆ ಬಂದಿಲ್ಲ? ಎಂಬುದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡಿದೆ.
ಮತದಾನ ಮಾಡಲು ಸಂಜೆ 4 ಗಂಟೆಯವರೆಗೂ ಸಮಯವಿರುವುದರಿಂದ ಕಾದು ನೋಡಬೇಕಾಗಿದೆ.
ಸದಸ್ಯರ ಸಂಖ್ಯಾ ಬಲ
ಶೆಟ್ಟಿಗೊಂಡನ ಹಳ್ಳಿ ಗ್ರಾಮ ಪಂಚಾಯ್ತಿ – 14
ಮಣೆಚೆಂಡೂರು ಗ್ರಾಮಪಂಚಾಯ್ತಿ – 14
ಸೊರವನಹಳ್ಳಿ ಗ್ರಾಮಪಂಚಾಯ್ತಿ-16
ಮಾಯಸಂದ್ರ ಗ್ರಾಮಪಂಚಾಯ್ತಿ-15
ವರದಿ: ವೆಂಕಟೇಶ ಜೆ ಎಸ್ (ವಿಕ್ಕಿ) ಮಾಯಸಂದ್ರ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700