ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗಳು ಬದುಕಿರುವಾಗಲೇ ಆಕೆಯ ಶ್ರದ್ಧಾಂಜಲಿ ಫ್ಲೆಕ್ಸ್ ಅಳವಡಿಸಿ, ಕುಟುಂಬವೇ ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.
ಇಷ್ಟವಿಲ್ಲದಿದ್ದರೂ ಮಗಳು ಚಿಲುವೆರಿ ಅನುಷಾ ಪ್ರೇಮ ವಿವಾಹವಾಗಿರುವುದು ತಂದೆ ಮತ್ತು ತಾಯಿಯ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮಗಳು ಜೀವಂತವಾಗಿರುವಾಗಲೇ ಮನೆಯ ಮುಂದೆ ಶ್ರದ್ಧಾಂಜಲಿ ಫ್ಲೆಕ್ಸ್ ಅಳವಡಿಸಿ, ಜನನ ಮತ್ತು ಮರಣದ ದಿನಾಂಕವನ್ನು ಬರೆಸಿ, ಫ್ಲೆಕ್ಸ್ ಮುಂದೆ ಇಡೀ ಕುಟುಂಬ ಗೊಳೋ ಎಂದು ಅಳುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಮಗಳಿಗೆ ಪಿಂಡ ಪ್ರದಾನ ಮಾಡಿರುವುದಾಗಿಯೂ ಸಂಬಂಧಿಕರಿಗೆ ತಿಳಿಸಿದ್ದಾರೆ.
ಸದ್ಯ ಪಾಲಕರು ಕಣ್ಣೀರಿಡುತ್ತಿರುವ ವೀಡಿಯೋ ವೈರಲ್ ಆಗಿದೆ. ಮಗಳನ್ನು ಪ್ರೀತಿಯಿಂದ ಸಾಕಿದ ತಂದೆಗೆ ಇಂತಹ ಅನ್ಯಾಯ ಆಗಬಾರದಿತ್ತು. ಅವರ ಮನವೊಲಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಓಡಿ ಹೋಗುವ ಮೂಲಕ ತಂದೆ-ತಾಯಿಯ ತಲೆ ತಗ್ಗಿಸುವಂತೆ ಮಾಡಿದ ಮಗಳ ವಿರುದ್ಧ ಪಾಲಕರು ಪ್ರತಿಭಟಿಸಿದ ರೀತಿ ಸರಿಯಿದೆ ಎಂದು ಕೆಲವು ಸ್ಥಳೀಯರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


