nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ
    • ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ
    • ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ
    • ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ
    • ಸಾಲವಿಲ್ಲದೆ ಯಾವುದೇ ದೇಶ–ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ; ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಸಿಎಂ ಸಿದ್ದರಾಮಯ್ಯ ತಿರುಗೇಟು
    • ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ
    • ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ; 45,000 ಕೋಟಿ ಗುರಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ ಸ್ವಿಫ್ಟ್ ಕಾರ್..!
    ರಾಷ್ಟ್ರೀಯ ಸುದ್ದಿ April 15, 2024

    ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ ಸ್ವಿಫ್ಟ್ ಕಾರ್..!

    By adminApril 15, 2024No Comments2 Mins Read

    ಕಾರು ಉತ್ಪಾದಕ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಸಂಪಾದಿಸಿರುವ ಮಾರುತಿ ಸುಜುಕಿ ಕಂಪನಿ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಹೊಸ ತಲೆಮಾರಿನ ಜನರಿಗಾಗಿ ಮಾರುತಿ ಸ್ವಿಫ್ಟ್ ಕಾರು ಇದೀಗ ಭಾರಿ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೊಸ ತಲೆಮಾರಿನ ಸ್ವಿಫ್ಟ್ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಸುಜುಕಿ ಕಂಪನಿಯು ಪ್ರಮುಖ ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಗೂ ಪರಿಚಯಿಸುತ್ತಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

    ಸ್ವಿಫ್ಟ್ ಹೊಸ ಮಾದರಿಯು ಈ ಬಾರಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಐಷಾರಾಮಿ ಲುಕ್ ಹೊಂದಿರುವ ಹೊರ ಭಾಗದ ವಿನ್ಯಾಸದೊಂದಿಗೆ ಕಾರಿನ ಒಳಭಾಗದಲ್ಲೂ ಹಲವಾರು ಸುಧಾರಿತ ಫೀಚರ್ಸ್ ಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಈ ಬಾರಿ 16 ಇಂಚಿನ ಅಲಾಯ್ ವ್ಹೀಲ್ಸ್, ಎಲ್ ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ಸ್ ಜೊತೆ ಎಲ್ ಇಡಿ ಡಿಆರ್ ಎಲ್ಎಸ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈರ್ ಲೇಸ್ ಆಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.


    Provided by
    Provided by

    ಹೊಸ ಸ್ವಿಫ್ಟ್ ನಲ್ಲಿ ಈ ಬಾರಿ ಜೆಡ್ ಸೀರಿಸ್ ನಲ್ಲಿರುವ ಜೆಡ್ 12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

    ಸ್ವಿಫ್ಟ್ ಹೊಸ ಮಾದರಿಯ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಸ್ವಿಫ್ಟ್ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಸುರಕ್ಷತೆಯಲ್ಲೂ ಗಮನ ಸೆಳೆಯಲಿದೆ. ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ ಹಲವಾರು ಸೌಲಭ್ಯಗಳಿರಲಿವೆ. ಹೀಗಾಗಿ ಹೊಸ ಕಾರು ಸದ್ಯದ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ. ಆರಂಭಿಕ ಮಾದರಿಯಲ್ಲೂ ಹಲವಾರು ಫೀಚರ್ಸ್ ನೋಡಬಹುದಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    Comments are closed.

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಒಳಮೀಸಲಾತಿ ಹೋರಾಟ ಸಮಿತಿ…

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ

    March 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.