ಈರುಳ್ಳಿ ತಿಂದ ಸಂದರ್ಭದಲ್ಲಿ ಅದರ ಕಡು ವಾಸನೆ ಬಾಯಿಯಲ್ಲಿ ಎಷ್ಟು ಹೊತ್ತಾದರೂ ಕಡಿಮೆಯೇ ಆಗುವುದಿಲ್ಲ. ಇದರಿಂದ ಹಲವರಿಗೆ ಇರುಸು-ಮುರುಸು ಉಂಟಾಗುವುದುಂಟು. ಹೀಗಾಗಿ ನಿವಾರಣೆಗೆ ಇಲ್ಲಿದೆ ಟಿಪ್ಸ್!!
ಕೆಲವರು ತಾವು ಆಹಾರ ಸೇವನೆ ಮಾಡುವಾಗ ಜೊತೆಯಲ್ಲಿ ಈರುಳ್ಳಿಯನ್ನು ನೆಂಚಿಕೊಂಡು ತಿನ್ನುತ್ತಾರೆ. ಅಥವಾ ಕೆಲವರಿಗೆ ಹಾಗೆಯೇ ತಿನ್ನುವ ಅಭ್ಯಾಸ ಕೂಡ ಉಂಟು. ಆದರೆ ಇದರ ಬಳಿಕ ದೀರ್ಘಕಾಲದ ವರೆಗೆ ಉಳಿಯುವ ಅದರದ್ದೇ ವಾಸನೆಯಿಂದ ಕೆಲವರು ತುಂಬಾ ಮುಜುಗರಕ್ಕೊಳಗಾಗುತ್ತಾರೆ. ಅಂಜಿಕೆಯಿಂದ ಮಾತೇ ಆಡುವುದಿಲ್ಲ. ಹಾಗಾದರೆ ಈ ರೀತಿಯ ಬಾಯಿಯ ವಾಸನೆಯನ್ನು ಮರೆಮಾಚಲು ಯಾವ ತಂತ್ರಗಳನ್ನು ಅನುಸರಿಸಬೇಕು ಎಂದು ನೀವು ಕೇಳುವುದಾದರೆ, ಅದಕ್ಕೆ ಸುಲಭವಾದ ಪರಿಹಾರಗಳು ಇಲ್ಲಿವೆ.
ನಿಮ್ಮ ಬಾಯಿಯಿಂದ ಈರುಳ್ಳಿ-ಬೆಳ್ಳುಳ್ಳಿಯ ವಾಸನೆಯನ್ನು ದೂರಾಗಿಸಲು ನೀವು ನಿಮಗಿಷ್ಟವಾದ ಹಣ್ಣುಗಳನ್ನು ಸೇವನೆ ಮಾಡಿ. ಸೇಬುಹಣ್ಣು, ಕಿತ್ತಳೆ ಹಣ್ಣು, ಪೈನಾಪಲ್, ದಾಳಿಂಬೆ ಹಣ್ಣು, ಸೀಬೆಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣಿನ ರಸ, ನೇರಳೆ ಹಣ್ಣು ಇತ್ಯಾದಿ ಹಣ್ಣುಗಳ ಸೇವನೆರು ತಕ್ಷಣವೇ ಬಾಯಿಯ ಸಹಿಸಲಸಾಧ್ಯವಾದ ವಾಸನೆಯಿಂದ ಮುಕ್ತಿ ನೀಡುತ್ತವೆ.
ಹಸಿರು ಚಹಾ, ಅದರ ಪಾಲಿಫಿನಾಲ್ ಗಳು ಅಥವಾ ಹೆಚ್ಚಿನ ಕೊಬ್ಬಿನಂಶ ಹೊಂದಿರುವ ಹಾಲು, ವಾಸನೆಯನ್ನು ಮರೆಮಾಚಲು ಸಹಾಯ ಮಾಡುತ್ತದೆ.
ಲವಂಗದ ವಾಸನೆ ಸಹ ತುಂಬಾ ಗಾಢವಾಗಿ ಇರುವುದರಿಂದ ಇದನ್ನು ಬಾಯಿಯಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಇದರ ರಸ ಸೇವನೆ ಮಾಡಲು ಮುಂದಾದರೆ ಆನಂತರದಲ್ಲಿ ಸಂಪೂರ್ಣವಾಗಿ ಕಾಫಿ ಸೇವನೆಯ ವಾಸನೆ ಬಾಯಿಂದ ದೂರವಾಗುತ್ತದೆ.
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದು ಬ್ಯಾಕ್ಟೀರಿಯಗಳ ಸೋಂಕನ್ನು ನಿವಾರಣೆ ಮಾಡುವಲ್ಲಿ ಮತ್ತು ಬಾಯಿಯ ದುರ್ವಾಸನೆಯನ್ನು ದೂರ ಮಾಡುವಲ್ಲಿ ಅತ್ಯಂತ ಲಾಭಕಾರಿ ಎಂದು ಹೇಳಬಹುದು. ಅಲ್ಲದೆ ಬಾಯಿಯ ದುರ್ವಾಸನೆಗೆ ಮುಕ್ತಿ ಕಾಣಿಸಲು ತಾಜಾ ಪುದಿನ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯಬೇಕು. ಇದರಿಂದ ಆದಷ್ಟು ಬೇಗನೆ ನಿಮ್ಮ ಬಾಯಿಯಲ್ಲಿ ಹೊಸ ತಾಜಾತನ ಕಂಡುಬರುವ ಜೊತೆಗೆ ಮೊದಲಿನ ರುಚಿ ನಿಮ್ಮ ನಾಲಿಗೆಗೆ ವಾಪಸ್ ಬರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296