nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2026 ಪ್ರಕಟ: ಶೇ. 94.10ರಷ್ಟು ಫಲಿತಾಂಶ, ದ.ಕ. ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ

    April 23, 2026

    ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು: ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ

    April 23, 2026

    ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ–ನೀರಿನ ಲಭ್ಯತೆ ಪರಿಶೀಲನೆ

    April 23, 2026
    Facebook Twitter Instagram
    ಟ್ರೆಂಡಿಂಗ್
    • ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2026 ಪ್ರಕಟ: ಶೇ. 94.10ರಷ್ಟು ಫಲಿತಾಂಶ, ದ.ಕ. ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ
    • ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು: ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ
    • ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ–ನೀರಿನ ಲಭ್ಯತೆ ಪರಿಶೀಲನೆ
    • ತುಮಕೂರಿನಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಸಂಭ್ರಮ: ಏಪ್ರಿಲ್ 24 ರಿಂದ 3 ದಿನ ಕ್ರೀಡಾ ಹಬ್ಬ
    • ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ
    • ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ
    • ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!
    • ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಕ್ಷಿಣದಲ್ಲಿ ಬಿಜೆಪಿಗೆ ಕರ್ನಾಟಕವೇ ಹೆಬ್ಬಾಗಿಲು
    ರಾಷ್ಟ್ರೀಯ ಸುದ್ದಿ April 26, 2024

    ದಕ್ಷಿಣದಲ್ಲಿ ಬಿಜೆಪಿಗೆ ಕರ್ನಾಟಕವೇ ಹೆಬ್ಬಾಗಿಲು

    By adminApril 26, 2024No Comments3 Mins Read
    b j p

    ಕರ್ನಾಟಕದಲ್ಲಿ ‘ಲೋಕ’ ರಾಜಕೀಯ ಚಿತ್ರಣವೇ ಬೇರೆ ಇದೆ. ಈ ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಜೊತೆಗೆ ಯಡಿಯೂರಪ್ಪನವರ ನಂತರದ ಕರ್ನಾಟಕದಲ್ಲಿ ಬಿಜೆಪಿ ಉಳಿವು ತುಂಬಾ ಕಷ್ಷವಿದೆ ಎನ್ನಲಾಗಿದೆ.

    ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ರಂಗೇರಿದಿ. ಪಕ್ಷಗಳ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಒಂದೆಡೆ ಮೋದಿ ಅಲೆಯ ಮೂಲಕ ಬಿಜೆಪಿ ಚುನಾವಣೆಯಲ್ಲಿ ಸೆಣೆಸಲು ಅಣಿಯಾಗಿದ್ದರೆ, ತನ್ನದೇ ಗ್ಯಾರಂಟಿ, ಜೋಡೋ ಯಾತ್ರೆಗಳ ಮೂಲಕ ಕಾಂಗ್ರೆಸ್ ಹೋರಾಡಲು ತಯಾರಾಗಿದೆ. ಇದೆಲ್ಲದರ ನಡುವೆ ದಕ್ಷಿಣ ಭಾರತದತ್ತ ತನ್ನ ಚಿತ್ತ ನೆಟ್ಟಿರುವ ಬಿಜೆಪಿ ಕರ್ನಾಟಕ ಹೊರತಾಗಿ ಇತರ ದಕ್ಷಿಣ ರಾಜ್ಯಗಳಲ್ಲಿ ತನ್ನ ಖಾತೆ ತೆರೆಯಲು ಶತಾಯ-ಗತಾಯ ಪ್ರಯತ್ನ ನಡೆಸಿದೆ. ಏನೇನು ತಯಾರಿ ಬೇಕು ಎಲ್ಲಾ ಮಾಡಿಕೊಂಡಿದೆ. ಹೀಗಾಗಿ ಕೆಲವು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ. ಆದರೂ ಕೂಡ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕೆಲವು ಸವಾಲುಗಳು ಕಂಡಿತಾ ಇದೆ.


    Provided by
    Provided by

    2024ರ ಲೋಕಸಭಾ ಚುನಾವಣೆ ಕುರಿತು ಈಗಾಗಲೇ ಸಾಕಷ್ಟು ಮಾಧ್ಯಮಗಳು, ಪತ್ರಿಕೆಗಳು ದೇಶಾದ್ಯಂತ ಸಾಕಷ್ಟು ಸಮೀಕ್ಷೆ ನಡೆಸಿ 3ನೇ ಬಾರಿಗೆ ಮೋದಿ ಸರ್ಕಾರಕ್ಕೆ ಜೈ ಅಂದಿವೆ. ಆದರೆ ಅವುಗಳ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿರುವುದು ಉತ್ತರ ಭಾರತದಲ್ಲಿ ಮಾತ್ರ. ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ. ಜೊತೆಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಇನ್ನಾವುದೇ ರಾಜ್ಯಗಳಲ್ಲೂ ‘ಕಮಲ’ ಅರಳುವ ಸುಳಿವು ಸಿಕ್ಕಿಲ್ಲ. ಅಂದರೆ ಕಳೆದ 10 ವರ್ಷಗಳಿಂದ ಉತ್ತರದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ದಕ್ಷಿಣ ಭಾಗ ಕಬ್ಬಿಣದ ಕಡಲೆಯಂತಾಗಿಯೇ ಉಳಿದಿದೆ. ಯಾಕೆಂದರೆ ಇಲ್ಲಿ ಅದರದ್ದೇ ಆದ ಸವಾಲುಗಳಿವೆ. ಹಾಗಿದ್ರೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗಿರುವ ಸವಾಲುಗಳೇನು? ನೋಡೋಣ ಬನ್ನಿ.

    2014 ರ ಚುನಾವಣೆ: ಈ ಚುನಾವಣೆಯಲ್ಲಿ ದಕ್ಷಿಣದಲ್ಲಿ ಬಿಜೆಪಿ 21 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆದರಲ್ಲೂ ಕರ್ನಾಟಕದ್ದೇ ಹೆಚ್ಚು. ಇನ್ನು 2009 ರಲ್ಲಿ 19 ಸ್ಥಾನ, 2004 ಮತ್ತು 1999 ರಲ್ಲಿ 18 ಸ್ಥಾನ, 1998 ರಲ್ಲಿ 20 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ರಾಜ್ಯಗಳಲ್ಲಿ ಇದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಬಿಜೆಪಿ ಸಂಖ್ಯೆಯು 7 ಕ್ಕಿಂತ ಕಡಿಮೆ ಇತ್ತು.

    2019 ಲೋಕಸಭಾ ಚುನಾವಣೆ: ಈ ಚುನಾವಣೆಲ್ಲಿ ಬಿಜೆಪಿ ಕಂಡು ಕೇಳರಿಯದ ಐತಿಹಾಸಿಕ ವಿಜಯ ಗಳಿಸಿದರೊ ದಕ್ಷಿಣ ಭಾರತದಲ್ಲಿ ಠುಸ್ ಎಂದಿತ್ತು. ಅಂದರೃ ಐದು ರಾಜ್ಯಗಳಲ್ಲಿನ 129 ಸ್ಥಾನಗಳಲ್ಲಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಗೆದ್ದು ಸಮಾಧಾನ ಪಟ್ಟಿತ್ತು. ಅದರಲ್ಲೂ ಈ 29 ರಲ್ಲಿ ಕರ್ನಾಟಕದ್ದೇ 25 ಸ್ಥಾನಗಳಿದ್ದವು. ಉಳಿದ ನಾಲ್ಕು ಸ್ಥಾನ ತೆಲಂಗಾಣ ರಾಜ್ಯದ್ದು. ಆಶ್ಚರ್ಯ ಅಂದ್ರೆ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಕೂಡ ಗೆದ್ದಿಲ್ಲ.

    ದಕ್ಷಿಣದ ರಾಜಕೀಯವು ಇಡೀ ದೇಶದಲ್ಲೇ ವಿಭಿನ್ನವಾಗಿದೆ. ಕರ್ನಾಟಕ ಹೊರತಾಗಿ ಪ್ರತಿ ರಾಜ್ಯದಲ್ಲಿ ಒಂದು ಅಥವಾ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊಂದಿದೆ. ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಐಎಸ್‌ಆರ್‌ಸಿಪಿ, ಬಿಆರ್‌ ಎಸ್‌ ನಂತಹ ಪಕ್ಷಗಳು ಪ್ರಾದೇಶಿಕವಾಗಿ(Local Partys) ಪ್ರಬಲವಾಗಿವೆ. ಇವು ಕಮಲ ಅರಳಲು ತಡೆಯೊಡ್ಡುತ್ತಿವೆ.

    ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಹಿಂದಿ, ಹಿಂದೂ ಮತ್ತು ಹಿಂದುತ್ವದ ಪಕ್ಷವೆಂದು ನೋಡುತ್ತಾರೆ. ಈ ಗ್ರಹಿಕೆಯು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ಪ್ರಾದೇಶಿಕ ಪಕ್ಷಗಳು ರಾಜ್ಯಗಳಿಗೆ ಸೀಮಿತವಾಗಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡುತ್ತವೆ. ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇದು ಅಸಾಧ್ಯ.

    ಕೆಲವು ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಭಾರತದ ಕಡೆ ನೀಡುವಷ್ಟು ಗಮನವನ್ನು ದಕ್ಷಿಣ ಭಾರತದ ಕಡೆ ನೀಡುತ್ತಿಲ್ಲ. ಅನುದಾನ, ಹಂಚಿಕೆ, ಯೋಜನೆ ರೂಪು ರೇಷೆ ಯಾವುದೇ ವಿಚಾರದಲ್ಲೂ ಇದು ಎದ್ದು ಕಾಣುತ್ತಿದೆ. ವರ್ಷದಿಂದ ವರ್ಕ್ಕೆ ಇದನ್ನು ಪ್ರತಿಪಕ್ಷಗಳು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

    ದಕ್ಷಿಣ ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಯನ್ನು ಬಹುವಾಗಿ ಪ್ರೀತಿಸುವವರು. ಈ ನಡುವೆ ಹಿಂದಿ ಹೇರಿಕೆ ವಿಚಾರ ಕೂಡ ಭಾರೀ ಸದ್ದು ಮಾಡಿ ಕೆಲವು ವಿರೋಧಕ್ಕೆ ಕಾರಣವಾಯಿತು.

    ಬಿಜೆಪಿ ಯಾವ ರಾಜ್ಯದಲ್ಲಿ ಎಷ್ಟು ಅಭ್ಯರ್ಥಿಗಳು:

    ಕರ್ನಾಟಕ – 25

    ಕೇರಳ – 16

    ತಮಿಳುನಾಡು – 23

    ತೆಲಂಗಾಣ – 17

    ಆಂಧ್ರ ಪ್ರದೇಶ – 6

    ದಕ್ಷಿಣ ರಾಜ್ಯಗಳಲ್ಲಿ ಯಾವ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

    2019 ರ ಚುನಾವಣೆ- 29

    * 2014 ರ ಚುನಾವಣೆ- 21

    * 2009 ರ ಚುನಾವಣೆ- 19


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

    admin
    • Website

    Related Posts

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2026 ಪ್ರಕಟ: ಶೇ. 94.10ರಷ್ಟು ಫಲಿತಾಂಶ, ದ.ಕ. ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ

    April 23, 2026

    ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಇಂದು ಬಹುನಿರೀಕ್ಷಿತ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (10ನೇ ತರಗತಿ)…

    ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು: ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ

    April 23, 2026

    ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ–ನೀರಿನ ಲಭ್ಯತೆ ಪರಿಶೀಲನೆ

    April 23, 2026

    ತುಮಕೂರಿನಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಸಂಭ್ರಮ: ಏಪ್ರಿಲ್ 24 ರಿಂದ 3 ದಿನ ಕ್ರೀಡಾ ಹಬ್ಬ

    April 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.