nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026
    Facebook Twitter Instagram
    ಟ್ರೆಂಡಿಂಗ್
    • ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?
    • ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?
    • ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು
    • ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?
    • ಸೈಕಲ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ:  5 ವರ್ಷದ ಮಗು ಸಾವು
    • ಟ್ರೆಕ್ಕಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ: ಯುವತಿ ಸಾವು
    • ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ
    • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಉಪನ್ಯಾಸಕರ ವೇತನ ತಡೆ ಖಂಡನೀಯ: ಲೋಕೇಶ್ ತಾಳಿಕಟ್ಟೆ
    ರಾಜ್ಯ ಸುದ್ದಿ May 3, 2024

    ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಉಪನ್ಯಾಸಕರ ವೇತನ ತಡೆ ಖಂಡನೀಯ: ಲೋಕೇಶ್ ತಾಳಿಕಟ್ಟೆ

    By adminMay 3, 2024No Comments2 Mins Read
    lokesh thalikatte

    ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

    ಅವರು ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದು ತರಗತಿಗೆ ಕನಿಷ್ಠ 40 ವಿದ್ಯಾರ್ಥಿಗಳಿರಬೇಕೆಂಬ ನಿಯಮವನ್ನು ಮಾಡಿ, 40ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳನ್ನೊಳಗೊಂಡ ಕಾಲೇಜುಗಳ ಮಾನ್ಯತೆ ನವೀಕರಣ ತಿರಸ್ಕರಿಸಿ, ನೋಟಿಸ್ ಜಾರಿ ಮಾಡಿದೆ. ಇದೇ ಕಾರಣಕ್ಕಾಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಎರಡು ತಿಂಗಳಿನಿಂದ ವೇತನ ತಡೆ ಹಿಡಿಯಲಾಗಿದೆ. ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿಯಿಂದಾಗಿ, ಇಂದು ಉಪನ್ಯಾಸಕರ ಕುಟುಂಬ ವರ್ಗ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

    ಪದವಿ ಪೂರ್ವ ಶಿಕ್ಷಣ ಇಲಾಖೆ ಮನಸ್ಸು ಇಚ್ಛೆ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ ಫಲವಾಗಿ, ಇಂದು ರಾಜ್ಯದಾದ್ಯಂತ ಸಾವಿರಾರು ಖಾಸಗಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅನವಶ್ಯಕವಾಗಿ ಕಾಲೇಜುಗಳಿಗೆ ಅನುಮತಿ ನೀಡಿದ್ದರ ಕಾರಣದಿಂದಾಗಿ ಇಂದು ಈ ಪರಿಸ್ಥಿತಿ ಒಳಗಿದ್ದು, ಇದಕ್ಕೆ ಮೂಲ ಕಾರಣ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನ ಎಂದು ಬೇಸರ ವ್ಯಕ್ತಪಡಿಸಿದರು.

    ಅನುದಾನಿತ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ಈ ದೇಶಕ್ಕೆ ನೀಡಿದೆ. ಇಂತಹ ಕಾಲೇಜುಗಳಿಗೆ ಅವೈಜ್ಞಾನಿಕವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೂಲವಾಗಿಸಿಕೊಂಡು ಮಾನ್ಯತೆ ನವೀಕರಣ ತಿರಸ್ಕರಿಸುವುದು ವೇತನ ತಡೆ ಹಿಡಿಯುವುದು ಎಷ್ಟು ಸರಿ? 2015ನೇ ಇಸವಿಯಿಂದ ನಿವೃತ್ತಿಯಿಂದ ತೆರವಾಗಿರುವ ಉಪನ್ಯಾಸಕ ಹುದ್ದೆಯನ್ನು ಸರ್ಕಾರ ತುಂಬಿಕೊಳ್ಳದೆ ಇರುವುದು ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದ್ದು ಇದನ್ನು ಯಾರು ಪ್ರಶ್ನಿಸಬೇಕು? ಇದು ಮೂಲಭೂತ ಹಕ್ಕಿನ ಹರಣವಲ್ಲವೇ? ಇಂದು ಪ್ರಶ್ನಿಸಿದರು.

    ಈ ಬಗ್ಗೆ ಯಾವೊಬ್ಬ ವಿಧಾನಪರಿಷತ್ ಸದಸ್ಯ ಅಥವಾ ಜನಪ್ರತಿನಿಧಿ ಸೋಲುತ್ತದೆ ಇರುವುದು ಸಹ ದುರ್ದೈವದ ಸಂಗತಿಯಾಗಿದ್ದು, ರೂಪ್ಸ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೂಡಲೇ ಈ ಅವೈಜ್ಞಾನಿಕ ಕ್ರಮವನ್ನು ಕೈ ಬಿಟ್ಟು ಉಪನ್ಯಾಸಕರಿಗೆ ತಡೆ ಹಿಡಿದಿರುವ ಎರಡು ತಿಂಗಳ ವೇತನವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ. ಅಧಿಕಾರಿಗಳು ತಮ್ಮ ಮಣ್ಣುತನವನ್ನು ಬಿಟ್ಟು ಸರಿಯಾದ ರೀತಿಯಲ್ಲಿ ಕ್ರಮವಹಿಸದೆ ಹೋದಲ್ಲಿ ತಾವು ಕಾನೂನಿನ ಹೋರಾಟಕ್ಕೂ ಸಹ ಸಿದ್ಧವಿರುವುದಾಗಿ ತಿಳಿಸಿದರು.


     

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

    admin
    • Website

    Related Posts

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    ರಾಜ್ಯಪಾಲರಿಗೆ ತಿಂಗಳಿಗೆ ಎಷ್ಟು ಸಂಬಳ; ರಾಜಭವನ ಸೇರಿ ಸಿಗುವ ಸೌಲಭ್ಯಗಳೇನು?

    October 16, 2026

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    Comments are closed.

    Our Picks

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ

    October 17, 2026

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೆಸರಿನಲ್ಲಿ ನಕಲಿ ಆ್ಯಪ್‌ ವೊಂದು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ…

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026

    ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?

    October 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.