ನಮ್ಮ ಆರೋಗ್ಯದ ಗುಟ್ಟು ತಿಳಿಯಲು ನಾವು ಯಾವಾಗಲೂ ಆಸ್ಪತ್ರೆಗೆ ಹೋಗಬೇಕು ಎಂದೇನಿಲ್ಲ. ನಮ್ಮ ದೇಹದಲ್ಲಿಯೇ ಆಗುವಂತಹ ಕೆಲವೊಂದು ಬದಲಾವಣೆಗಳು ಮತ್ತು ಸೂಚನೆಗಳು ನಮಗೆ ನಮ್ಮ ಸದ್ಯದ ಆರೋಗ್ಯ ಸ್ಥಿತಿಯ ಬಗೆಗಿನ ಮಾಹಿತಿಯನ್ನು ಕೊಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇದ್ದಕ್ಕಿದ್ದಂತೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಅದನ್ನು ಜಾಂಡೀಸ್ ಎಂದು ಹೇಳಬಹುದು. ಮಂಡಿಗಳನ್ನು ಮಡಿಸಲು ಆಗದಿದ್ದರೆ, ಅಥವಾ ಕುಳಿತು ಮೇಲಕ್ಕೆ ಎದ್ದೇಳಲು ಆಗದಿದ್ದರೆ, ಅದನ್ನು ಕೀಲು ನೋವು ಎನ್ನಬಹುದು. ಹೀಗೆ ಹಲವಾರು ವಿಚಾರಗಳ ಮೂಲಕ ನಮ್ಮ ದೇಹದ ಆರೋಗ್ಯದ ಸ್ಥಿತಿಗತಿಯನ್ನು ನಾವು ತಿಳಿದುಕೊಳ್ಳಬಹುದು.
ಹಾಗಾದರೆ ಮನುಷ್ಯ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣವನ್ನು ಗಮನಿಸಿ ಅದರಿಂದ ಆರೋಗ್ಯದ ಗುಟ್ಟು ತಿಳಿಯಬಹುದೇ ಎಂದು ನೀವು ಪ್ರಶ್ನೆ ಕೇಳಿದರೆ, ಹೌದು ಎನ್ನುತ್ತದೆ ವೈದ್ಯಲೋಕ. ಒಂದೊಂದು ಮೂತ್ರದ ಬಣ್ಣಕ್ಕೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಇರಬಹುದು ಎನ್ನುವುದು ವೈದ್ಯರ ಮಾತು. ಬನ್ನಿ ಹಾಗಾದರೆ ಬೇರೆ ಮೂತ್ರದ ಬಣ್ಣಕ್ಕೆ ಅನುಗುಣವಾಗಿ ಯಾವ ಕಾಯಿಲೆಗಳು ಇರುತ್ತವೆ ಎಂಬುದನ್ನು ತಿಳಿಯೋಣ.
ತಿಳಿ ಕಂದು ಬಣ್ಣ: ಒಂದು ವೇಳೆ ನಿಮ್ಮ ಮೂತ್ರದ ಬಣ್ಣ, ತಿಳಿ ಕಂದು ಬಣ್ಣದಿಂದ ಕೂಡಿದ್ದರೆ, ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ ಮತ್ತು ನಿಮ್ಮ ದೇಹಕ್ಕೆ ಇನ್ನಷ್ಟು ನೀರಿನ ಅವಶ್ಯಕತೆ ಇದೆ ಎಂಬುದನ್ನು ಸೂಚಿ ಸುತ್ತದೆ. ನೀರನ್ನು ಕುಡಿದ ನಂತರ ಸಹಜವಾಗಿ ಈ ಸಮಸ್ಯೆ ಸರಿ ಹೋಗುತ್ತದೆ. ಒಂದು ವೇಳೆ ಸರಿ ಆಗಲಿಲ್ಲ ಎಂದರೆ, ಅದು ನಿಮ್ಮ ಲಿವರ್ ಅಥವಾ ಕಿಡ್ನಿ ಡ್ಯಾಮೇಜ್ ಆಗಿರುವುದರ ಸೂಚನೆ ಇರಬಹುದು.
ಇದರ ಜೊತೆಗೆ ಹೊಟ್ಟೆ ನೋವು, ಚರ್ಮದ ಮೇಲೆ ದದ್ದುಗಳು ಮತ್ತು ಕೈಕಾಲು ಹಿಡಿದುಕೊಂಡಂತೆ ಆಗುವುದು ಏನಾದರೂ ಕಂಡುಬಂದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಭೇಟಿಯಾಗಿ ನಿಮ್ಮ ಆರೋಗ್ಯದ ಪರೀಕ್ಷೆ ಮಾಡಿಸಿ ಮಾಹಿತಿ ಪಡೆದುಕೊಳ್ಳಿ. ಯಾವುದೇ ಬಣ್ಣ ಇಲ್ಲದಿರುವುದು! ನೀವು ಆದರೆ ಚೆನ್ನಾಗಿ ನೀರು ಕುಡಿದು ಆರೋಗ್ಯವಾಗಿ ಇದ್ದೀನಿ ಎಂದು ತಿಳಿದುಕೊಳ್ಳುತ್ತೀರಿ. ಆದರೆ ಕೆಲವೊಮ್ಮೆ ಅತಿಯಾಗಿ ನೀರು ಕುಡಿಯುವುದು ಕೂಡ ಡೇಂಜರ್ ಎಂದು ಹೇಳುತ್ತಾರೆ. ಏಕೆಂದರೆ ಹೆಚ್ಚು ನೀರು ನಿಮ್ಮ ದೇಹದಲ್ಲಿನ ಉಪ್ಪಿನ ಅಂಶವನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಇದು ಕ್ರಮೇಣವಾಗಿ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಕಂಡುಬರುವ ಹಾಗಿರಬಹುದು. ಹೀಗಾಗಿ ನೀವು ನಿಮಗೆ ಎಷ್ಟು ಅವಶ್ಯಕತೆ ಇದೆ ಅಷ್ಟು ಮಾತ್ರ ನೀರು ಕುಡಿಯಿರಿ.
ಕೆಂಪು ಅಥವಾ ಗುಯಲಾಬಿ ಬಣ್ಣ: ಈ ಬಣ್ಣದಲ್ಲಿ ಮೂತ್ರ ಇರಬಹುದಾ ಎಂಬ ಗೊಂದಲ ಬೇಡ. ಏಕೆಂದರೆ ಈ ರೀತಿ ಕೂಡ ಮೂತ್ರದ ಬಣ್ಣ ಇರುತ್ತದೆ ಎನ್ನುತ್ತಾರೆ ವೈದ್ಯರು. ಯಾವಾಗ ನೀವು ಬೀಟ್ರೂಟ್, ಬ್ಲಾಕ್ಬೆರ್ರಿ ಇತ್ಯಾದಿ ಹಣ್ಣು ಗಳನ್ನು ಹೆಚ್ಚಾಗಿ ತಿನ್ನುತ್ತೀರಿ, ಅಂತಹ ಸಮಯದಲ್ಲಿ ನಿಮ್ಮ ದೇಹದಲ್ಲಿ ಮೂತ್ರದ ಬಣ್ಣ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ಔಷಧಿಗಳು ಕೂಡ ನಿಮ್ಮ ಮೂತ್ರದ ಬಣ್ಣ ಬದಲಾಗುವ ಹಾಗೆ ಮಾಡಬಹುದು.
ಆದರೆ ಯಾವಾಗ ಮೂತ್ರದಲ್ಲಿ ರಕ್ತ ಹೋಗುವುದು ಕಂಡುಬರುತ್ತದೆ. ಆಗ ಅದು ಮೂತ್ರನಾಳದ ಸೋಂಕನ್ನು ಸೂಚಿಸುತ್ತದೆ. ಕಿಡ್ನಿ ಸಮಸ್ಯೆ, ಕಿಡ್ನಿ ಕಲ್ಲುಗಳು ಅಥವಾ ಗಂಟು ಸಮಸ್ಯೆ ಕೂಡ ಇರಬಹುದು. ರಕ್ತ ಹೆಪ್ಪುಗಟ್ಟಿರುವ ಬಗ್ಗೆ ನಿಮಗೆ ಏನಾದರೂ ಕುರುಹು ಸಿಕ್ಕರೆ, ಅಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಕಿತ್ತಳೆ ಬಣ್ಣ: ನೀವು ಒಂದು ವೇಳೆ anti-inflammatory ಅಥವಾ ಕಿಮೊತೆರಪಿಗೆ ಸಂಬಂಧಪಟ್ಟ ಔಷಧಿಗಳನ್ನು ಏನಾದರೂ ತೆಗೆದುಕೊಳ್ಳುತ್ತಿದ್ದರೆ, ಅದರಿಂದಲೂ ಸಹ ನಿಮ್ಮ ಮೂತ್ರದ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ. ಗಾಢವಾದ ಹಳದಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ನಿಮ್ಮ ಮೂತ್ರ ಬದಲಾಗಿದೆ ಎಂದರೆ ನಿಮ್ಮ ದೇಹದಲ್ಲಿ ನೀರಿನ ಅಂಶ ಸಾಕಷ್ಟು ಕಡಿಮೆಯಾಗಿದೆ ಎಂದರ್ಥ.
ವೈದ್ಯರ ಪ್ರಕಾರ ಇದು ಸಹ ಮೂತ್ರನಾಳದ ಸೋಂಕನ್ನು ಸೂಚಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಇದು ನಿಮಗೆ ಬೇರೊಂದು ರೀತಿಯ ಮಾರಕ ಸಮಸ್ಯೆ ಇರಬಹುದು. ಹಾಗಾಗಿ ಇದನ್ನು ನೀವು ನಿರ್ಲಕ್ಷ ಮಾಡ ಬೇಡಿ. ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296