nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಸ್‌ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ

    July 24, 2026

    ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್

    July 24, 2026

    ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ

    July 24, 2026
    Facebook Twitter Instagram
    ಟ್ರೆಂಡಿಂಗ್
    • ಎಸ್‌ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
    • ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
    • ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
    • ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
    • ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
    • ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
    • ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
    • ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಯಲ್ ಆಗಿ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ RCB: ಚೆನ್ನೈ ಗೆ ಟಾಟಾ ಎಂದ ಫ್ಯಾನ್ಸ್..!
    ರಾಜ್ಯ ಸುದ್ದಿ May 19, 2024

    ರಾಯಲ್ ಆಗಿ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ RCB: ಚೆನ್ನೈ ಗೆ ಟಾಟಾ ಎಂದ ಫ್ಯಾನ್ಸ್..!

    By adminMay 19, 2024No Comments3 Mins Read
    cricket

    ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ತಂಡವು ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ಈ ಸಲ ಕಪ್‌ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ ಸಿಬಿ 27 ರನ್ ‌ಗಳ ಗೆಲುವು ದಾಖಲಿಸಿತು. ಒಂದು ವೇಳೆ ಪಂದ್ಯ ಸೋತು 201 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್‌ ಸಿಬಿ ಬೌಲರ್‌ ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್‌ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್‌ಗಳ ಅಂತರದಲ್ಲಿ ಗಾಯಕ್‌ವಾಡ್‌ ಪಡೆ ಪ್ಲೇ-ಆಫ್‌ನಿಂದ ಮುಗ್ಗರಿಸಿತು. ಬೆಂಗಳೂರು ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಪಂದ್ಯ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿತು.

    ತವರಿನಲ್ಲೇ ಆರ್‌ ಸಿಬಿ ಅಭಿಮಾನಿಗಳಿಗೆ ಭರ್ಜರಿ ಗೆಲುವಿನ ಗಿಫ್ಟ್‌ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ ಸಿಬಿ 20 ಓವರ್‌ ಗೆ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಉತ್ತಮ ಶುಭಾರಂಭ ನೀಡಿದ ಆರ್‌ಸಿಬಿ ಬ್ಯಾಟರ್‌ ಗಳು ಚೆನ್ನೈ ಬೌಲರ್ ‌ಗಳನ್ನು ದಂಡಿಸಿದರು. 3 ಓವರ್‌ಗೆ 31 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲಹೊತ್ತಿನಲ್ಲಿ ಮತ್ತೆ ಪಂದ್ಯ ಪುನಾರಂಭವಾಯಿತು. 6.4 ಓವರ್‌ನಲ್ಲಿ ಕೊಹ್ಲಿ ಮತ್ತು ಡು ಪ್ಲೆಸಿಸ್‌ 50 ರನ್‌ಗಳ ಜೊತೆಯಾಟವಾಡಿದರು. ಹೊಡಿಬಡಿ ಆಟವಾಡುತ್ತಿದ್ದ ಕೊಹ್ಲಿ ಅರ್ಧಶತಕ ವಂಚಿತರಾಗಿ (47 ರನ್‌, 29 ಬಾಲ್‌, 3 ಫೋರ್‌, 4 ಸಿಕ್ಸರ್‌) ಔಟಾದರು. ಇತ್ತ ಜವಾಬ್ದಾರಿಯುತ ಆಟವಾಡಿದ ಡು ಪ್ಲೆಸಿಸ್‌ ಅರ್ಧಶತಕ (54 ರನ್‌, 39 ಬಾಲ್‌, 3 ಫೋರ್‌, 3 ಸಿಕ್ಸರ್‌) ಬಾರಿಸಿದರು.

    ಆದರೆ ವಿವಾದಾತ್ಮಕ ರನೌಟ್‌ ತೀರ್ಪಿಗೆ ಔಟ್‌ ಆಗಿ ಪೆವಿಲಿಯನ್‌ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ರಜತ್‌ ಪಾಟೀದಾರ್‌ 41 ರನ್‌ ಸಿಡಿಸಿ (23 ಬಾಲ್‌, 2 ಫೋರ್‌, 4 ಸಿಕ್ಸರ್‌) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು. ಕ್ರೀಸ್‌ ಗೆ ಬಂದ ಯಾವೊಬ್ಬ ಬ್ಯಾಟರ್‌ ಕೂಡ ನಿರಾಸೆ ಮೂಡಿಸಲಿಲ್ಲ. ಕ್ಯಾಮರೂನ್‌ ಗ್ರೀನ್‌ (38), ದಿನೇಶ್‌ ಕಾರ್ತಿಕ್‌ (14) ರನ್‌ ಗಳಿಸಿದರು. ಫಾರ್ಮ್‌ ಕಳೆದುಕೊಂಡು ನಿರಾಸೆ ಮೂಡಿಸಿದ್ದ ಮ್ಯಾಕ್ಸ್‌ವೆಲ್‌ ಇಂದಿನ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೂ ಗಮನ ಸೆಳೆದರು. ಕೇವಲ 5 ಬಾಲ್‌ಗಳಿಗೆ 2 ಫೋರ್‌ ಮತ್ತು 1 ಸಿಕ್ಸ್‌ನೊಂದಿಗೆ 16 ರನ್‌ ಸಿಡಿಸಿದರು.

    ದೊಡ್ಡ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್‌ ನೀಡಿದರು. ನೋಬಾಲ್‌ ಮತ್ತು ವೈಡ್‌ ಸೇರಿ ಆರ್‌ಸಿಬಿಗೆ 8 ರನ್‌ ಹೆಚ್ಚುವರಿಯಾಗಿ ಬಂತು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ಹಾಗೂ ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್‌ ಕಿತ್ತರು. ಆರ್‌ಸಿಬಿ ನೀಡಿದ 219 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ಆರಂಭಿಕ ಆಘಾತ ಎದುರಾಯಿತು. ಚೆನ್ನೈ ರನ್‌ ಖಾತೆ ತೆರೆಯುವ ಮೊದಲೇ ನಾಯಕ ಗಾಯಕ್ವಾಡ್‌ ಔಟಾಗುವ ಮೂಲಕ ವಿಕೆಟ್‌ ಖಾತೆ ತೆರೆಯಿತು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 58 ರನ್‌ ಗಳಿಸಿದ್ದ ಸಿಎಸ್‌ ಕೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ರಚಿನ್‌ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತು. ಈ ಜೋಡಿ 41 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು.

    ರಚಿನ್‌ ಅರ್ಧಶತಕ ಗಳಿಸಿ (61 ರನ್‌, 37 ಬಾಲ್‌, 5 ಫೋರ್‌, 3 ಸಿಕ್ಸರ್‌) ಮಿಂಚಿದರು. ಅಜಿಂಕ್ಯ 33 ರನ್‌ಗಳಿಸಿ ಔಟಾದರು. ಈ ವೇಳೆ ರಚಿನ್‌ಗೆ ದುಬೆ ಜೊತೆಯಾದರು. ಜವಾಬ್ದಾರಿಯುತ ಆಟವಾಡುತ್ತಾ ಬಂದ ರಚಿನ್‌ 2 ರನ್‌ ಕದಿಯಲು ಮುಂದಾಗಿ ರನೌಟ್‌ ಆದರು. ಇವರ ಬೆನ್ನಲ್ಲೇ ಶಿವಂ ದುಬೆ ಕ್ಯಾಚ್‌ ನೀಡಿ ಹೊರನಡೆದಿದ್ದು ಆರ್‌ಸಿಬಿ ನಿಟ್ಟುಸಿರು ಬಿಡುವಂತಾಯಿತು. ವೇಳೆ ಕ್ರೀಜ್‌ ಗೆ ಬಂದ ಜಡೇಜಾ ಹೊಡಿಬಡಿ ಆಟವಾಡಿ ಆರ್‌ ಸಿಬಿ ಬೌಲರ್‌ ಗಳನ್ನು ಕಾಡಿದರು. 22 ಬಾಲ್‌ ಗಳಿಗೆ 42 ರನ್‌ ಬಾರಿಸಿ ಪ್ಲೇ-ಆಫ್‌ ಭರವಸೆ ಮೂಡಿಸಿದ್ದರು. ಅವರಿಗೆ ಮಾಜಿ ನಾಯಕ ಧೋನಿ ಕೂಡ ಸಾಥ್‌ ನೀಡಿದರು. ಧೋನಿ 13 ಬಾಲ್‌ ಗೆ 25 ರನ್‌ಗಳಿಸಿ ಕ್ಯಾಚ್‌ ನೀಡಿ 19ನೇ ಓವರ್ ‌ನಲ್ಲಿ ನಿರ್ಗಮಿಸಿದ್ದು ಆರ್‌ ಸಿಬಿಗೆ ಇನ್ನಷ್ಟು ಭರವಸೆ ನೀಡಿತು. ಪ್ಲೇ-ಆಫ್‌ ಕಾರಣಕ್ಕೆ ಕೊನೆ ಓವರ್‌ ವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಚೆನ್ನೈ ತಂಡವನ್ನು 191 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಆರ್‌ ಸಿಬಿ ಬೌಲರ್ ‌ಗಳು ಯಶಸ್ವಿಯಾದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     


    Provided by
    Provided by
    admin
    • Website

    Related Posts

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    Comments are closed.

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಎಸ್‌ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ

    July 24, 2026

    ತುಮಕೂರು: ಎಸ್‌ ಐಆರ್ ಎನ್ಯುಮರೇಷನ್ ಅರ್ಜಿ ವಿತರಣೆಯಲ್ಲಿ ಜು.23ರ ಗುರುವಾರದ ಅಂತ್ಯಕ್ಕೆ ಶೇ.100ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ…

    ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್

    July 24, 2026

    ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ

    July 24, 2026

    ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್

    July 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.