ದಾವಣಗೆರೆ: ಗಂಡ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗು ನಾಪತ್ತೆಯಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಕೇಸ್ ತಲೆನೋವು ತಂದಿದೆ. ದಾವಣಗೆರೆ ನಗರದ ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಲ್ಲಿರುವ ಡೋರ್ ನಂ 1182, ಬಸವರಾಜಪ್ಪ ಎಸ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ. 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಬಳಿಕ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ.
ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ದೂರು ನೀಡಿದ್ದಾರೆ. ತಾಯಿ ರುದ್ರವ್ವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ನಾಗವೇಣಿ ಅವರು ನಾವು ಸುರಕ್ಷಿತವಾಗಿದ್ದೇವೆ, ವೈಯಕ್ತಿಕ ಕಾರಣಗಳಿಂದ ಮನಸ್ಸಿಗೆ ನೋವಾಗಿದೆ. ಸಮಸ್ಯೆಗಳು ಬಗೆಹರಿದ ಬಳಿಕ ಬರುತ್ತೇವೆ ಎಂದು ಅಜ್ಞಾತ ಸ್ಥಳದಿಂದಲೇ ಆತಂಕ ಪಡಬೇಡಿ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ರುದ್ರವ್ವ ಅವರಿಗೆ ಪೊಲೀಸರಿಗೆ ತಿಳಿಸಿದ್ದಾರೆ. ಅಂಜನ್ ಬಾಬು ಮತ್ತು ನಾಗವೇಣಿ 5 ವರ್ಷದ ಹಿಂದೆ ಮದುವೆ ಆಗಿದ್ದರು.
ಈ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ. ಅಂಜನ್ ಬಾಬು ಪಿಜಿ ಬಡಾವಣೆ ಬ್ಯಾಡಗಿ ಶೆಟ್ಟರ್ ಶಾಲೆ ಹತ್ತಿರ ಇರುವ ಷೇರು ಮಾರ್ಕೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಮನೆಗೆ ನಾಗವೇಣಿ ಅವರ ತಾಯಿ ರುದ್ರವ್ವ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು. ಕಳೆದ ತಿಂಗಳು ಅಂದರೆ ಏಪ್ರಿಲ್ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರುದ್ರವ್ವ ಮಗಳ ಮನೆಗೆ ಬಂದಿದ್ದಾರೆ. ಸಂಜೆಯವರೆಗೆ ಮಗಳು, ಮೊಮ್ಮಗಳ ಜೊತೆ ಸಂಜೆವರೆಗೂ ರುದ್ರವ್ವ ಕಾಲ ಕಳೆದಿದ್ದಾರೆ. ಸಂಜೆ ಆರು ಗಂಟೆಗೆ ನಾಗವೇಣಿ ಗಂಡ ಅಂಜನ್ ಬಾಬು ಪತ್ನಿಗೆ ಪೋನ್ ಮಾಡಿದ್ದಾನೆ. ಆಗ ತನ್ನ ಪುತ್ರಿ ಜೊತೆ ನಾಗವೇಣಿ ತೆರಳಿದ್ದಾಳೆ. ಆ ಬಳಿಕ ತಾಯಿಗೆ ನೀನು ಮನೆಯಲ್ಲಿ ಇರು ಎಂದು ಹೇಳಿದ್ದಾಳೆ. ಅದಕ್ಕೆ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆಂದು ತಾಯಿ ಕೇಳಿದಕ್ಕೆ, ಕರೆದುಕೊಂಡು ಬಂದ ಮೇಲೆ ಹೇಳುತ್ತೇನೆಂದು ತನ್ನ ಮಗಳು ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಾಯಿಗೆ ಪೋನ್ ಮಾಡಿದ್ದ ಮಗಳು ನಾಗವೇಣಿ ನಾವು ಬೆಳಿಗ್ಗೆ ಬರುತ್ತೇವೆ, ನೀನು ಊಟ ಮಾಡಿ ಮಲಗಿಕೋ ಎಂದು ತಾಯಿಗೆ ಹೇಳಿದ್ದಾಳೆ. ಅದರಂತೆ ಬೆಳಿಗ್ಗೆ ಪೋನ್ ಮಾಡಿದಾಗ ಸ್ವೀಚ್ ಆಪ್ ಆಗಿತ್ತಂತೆ. ಇದಾದ ನಂತರ ರುದ್ರವ್ವ ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಮಗಳ ಮನೆಗೆ ಬೀಗ ಹಾಕಿಕೊಂಡು ಮರಳಿ ಊರಿಗೆ ಹೋಗಿದ್ದಾಳೆ. ಸುಮಾರು ದಿನಗಳಾದರೂ ಬರದೆ ಇರುವ ಕಾರಣ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದ್ದಾಳೆ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಆತಂಕಗೊಂಡ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪುತ್ರಿ, ಅಳಿಯ ಹಾಗೂ ಮೊಮ್ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


