nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್
    ಕೊರಟಗೆರೆ January 21, 2026

    ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್

    By adminJanuary 21, 2026No Comments2 Mins Read
    g parameshwar

    ಕೊರಟಗೆರೆ: ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ 50 ಕೋಟಿ ಅನುದಾನ ತಂದು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

    ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಶಾಂತಲಿಂಗಯ್ಯನ ಪಾಳ್ಯ ಗ್ರಾಮದ ಮುಖ್ಯ ರಸ್ತೆಗೆ ಸುಮಾರು 60 ಲಕ್ಷದ ಕಾಮಗಾರಿ ಉದ್ಘಾಟಿಸಿ ಹಾಗೂ ಬಿ.ಡಿ.ಪುರ ಗ್ರಾಮದಲ್ಲಿ 40 ಲಕ್ಷ ರೂಗಳ ಗ್ರಾಪಂ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


    Provided by
    Provided by

    ಕೊರಟಗೆರೆ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ದಶಕಗಳಿಂದ ರಸ್ತೆಗಳು ಅಭಿವೃದ್ದಿ ಹೊಂದಿಲ್ಲ ಎನ್ನವ ಗ್ರಾಮಸ್ಥರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳಿಂದ 50 ಕೋಟಿಗಳ ವಿಶೇಷ ಅನುದಾನದಲ್ಲಿ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ವರ್ಷ 50 ಕೋಟಿಗಳನ್ನ ಪೂರೈಸಿ ಮುಂಬರುವ ದಿನಗಳಲ್ಲಿ ಮತ್ತೆ 50 ಕೋಟಿ ರೂ ಅನುದಾನ ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗವುದು ಎಂದರು.

    ತಾಲ್ಲೂಕಿನ ಜನರ ಬೇಡಿಕೆಯಂತೆ ಈಗಾಗಲೇ ತೋವಿನಕೆರೆ ಹೋಬಳಿ ಕೇಂದ್ರದಲ್ಲಿ 36 ಕೋಟಿ ವ್ಯಚ್ಚದಲ್ಲಿ ಆಸ್ಪತ್ರೆಯನ್ನ ಮೇಲ್ಜಾಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು. ಶೀಘ್ರದಲ್ಲಿ ಉದ್ಘಾಟಿಸಲಾಗವುದು, ಅದೆ ರೀತಿ ಕೊರಟಗೆರೆ ಪಟ್ಟಣದಲ್ಲಿ ಬೇಡಿಕೆಯಂತೆ 32  ಕೋಟಿ ರೂ. ಗಳ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗುವುದು ಹಾಗೂ ಕೋಳಾಲ ಹೋಬಳಿ ಕೇಂದ್ರದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ವಿಶೇಷ ಅನುದಾನವನ್ನು ಮುಂಬರುವ ಆಯಾವ್ಯಯದಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗಳನ್ನ ಕೋರಲಾಗುವುದು. ಕ್ಷೇತ್ರದ ಜನರ ಆರೋಗ್ಯದ ದೃಷ್ಠಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಎಂದು ತಿಳಿಸಿದರು.

    ಕೊರಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದೇರ್ಜೆಗೆ ಏರಿಸಲಾಗಿದ್ದು, ಪಟ್ಟಣದ ಬೆಳವಣಿಗೆಗೆ ಸುತ್ತಮುತ್ತಲ ಗ್ರಾಮಗಳನ್ನ ಸೇರಿಸಿಕೊಂಡು ಪುರಸಭೆಯನ್ನಾಗಿ ಊರಿನ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬರುವಂತೆ ಮಾಡಲಾಗುತ್ತಿದೆ. ಪಟ್ಟಣವು ಅತ್ಯಂತ ಇಕ್ಕಟ್ಟಾದ ಪ್ರದೇಶದಲ್ಲಿ ಜನರು ವಾಸುತ್ತಿದ್ದು, ಈ ಬೆಳವಣಿಗೆಯಿಂದ ಸುತ್ತಮುತ್ತಲ ಪ್ರದೇಶವು ವಾಸ ಸ್ಥಳಕ್ಕೆ ಅಭಿವೃದ್ದಿಗೊಂಡು ಮೂಲಭೂತ ಸೌಕರ್ಯ ಹೆಚ್ಚುವುದಾಗಿ ತಿಳಿಸಿದರು.

    ಇದೆ ಸಂದರ್ಭದಲ್ಲಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಧುಗಿರಿ ಎಸಿ ಶಿವಪ್ಪ ಗೋಟ್ಟೂರು, ತಹಶೀಲ್ದಾರ್ ಮಂಜುನಾಥ್, ಇ.ಓ. ಅಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವಥ್‌ನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ  ಗ್ರಾಪಂ ಅಧ್ಯಕ್ಷೆ ಸೌಮ್ಯ, ಪಿಡಿಒ ಲಕ್ಷ್ಮಿನಾರಾಯಣ್, ಮುಖಂಡರಾದ ಎಲ್.ರಾಜಣ್ಣ, ಕವಿತಮ್ಮ, ದೇವರಾಜು, ಜಯರಾಮು, ಮಹಾಲಿಂಗಪ್ಪ, ರವಿಕುಮಾರ್, ಹನುಮಂತರಾಜು, ಅಟಿಕನಾಗರಾಜು, ಸೇರಿದಂತೆ ಇತರರು ಹಾಜರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಂಸ್ಕೃತಿಯನ್ನು ಗೌರವಿಸುವ ಧಾರ್ಮಿಕ ಹಬ್ಬಗಳು ಹೆಚ್ಚು ನಡೆಯಬೇಕು: ಪಿ.ಎನ್‌.ಕೃಷ್ಣಮೂರ್ತಿ

    February 6, 2026

    ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ

    February 6, 2026

    ಪ್ರತಿಯೊಂದು ಗ್ರಾಮದಲ್ಲೂ ನಾಗರಕಟ್ಟೆ; ಈ ಪರಂಪರೆಯ ಹಿಂದೆ ಅಡಗಿದೆ ವಿಜ್ಞಾನ: ಡಾ.ಹನುಮಂತನಾಥ ಸ್ವಾಮೀಜಿ

    February 5, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ತಿಪಟೂರು: ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ…

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.