ಮಂಡ್ಯ: ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿದ್ದ ವ್ಯಕ್ಯಿಯನ್ನು ವಂಚಿಸಿ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರದಲ್ಲಿ ಜರುಗಿದೆ. ಬ್ಯಾಂಕ್ ನಿಂದ 7.5 ಲಕ್ಷ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವೇಳೆ ಕಾರು ನಿಲ್ಲಿಸಿ ಸಿನಿಮೀಯ ರೀತಿ ಹಣ ದರೋಡೆ ಮಾಡಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಿಮ್ಮ ಕಾರ್ ನಿಂದ ಇಂಧನ ಸೋರಿಕೆಯಾಗುತ್ತಿದೆ ಎಂದು ಕಾರ್ ನಿಲ್ಲಿಸಿ ಕೃತ್ಯ ನಡೆಸಲಾಗಿದೆ.
ಕಾರು ನಿಲ್ಲಿಸಿ ಇಂಧನ ಸೋರಿಕೆ ತಪಾಸಣೆಗೆ ತೆರಳುತ್ತಿದ್ದಂತೆ ಕಾರಿನಲ್ಲಿ ಹಣದ ಬ್ಯಾಗ್ ಸಮೇತ ಪರಾರಿ ಆಗಿದ್ದಾರೆ. ಕ್ಯಾತೇಗೌಡನದೊಡ್ಡಿಯ ಕೃಷ್ಣೇಗೌಡ ಹಣ ಕಳೆದುಕೊಂಡವರು ಎನ್ನಲಾಗಿದೆ. ಈ ಸಂಬಂಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ವ್ಯಕ್ತಿಯಿಂದ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರಿಂದ ಕೃತ್ಯ ನಡೆಸಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


