ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಊರಲ್ಲಿ ಗೌರವ ಸಿಗಲಿ ಎಂದು ಯುವಕನೋರ್ವ ನಕಲಿ ಅಧಿಕಾರಿ ವೇಶ ಹಾಕಿದ ಘಟನೆ ಜರುಗಿದೆ.
ಸಂಗಮೇಶ್ ಲಕ್ಕಪ್ಪಗೋಳ ಎಂಬಾತ ಇಂಟಲಿಜೆನ್ಸಿ ಬ್ಯೂರೋ ಅಧಿಕಾರಿ ವೇಶ ಹಾಕಿದ್ದಾನೆ. ಇಂಟಲಿಜೆನ್ಸ್ ಬ್ಯೂರೋದ ನಕಲಿ ಐಡಿ ಕಾರ್ಡ್, ಕ್ಯಾಪ್ ಹೊಂದಿದ್ದನು. ಬೈಕ್ ಮೇಲೂ ಐಬಿ ಲೋಗೋ ಹಾಕಿಕೊಂಡಿದ್ದ. ಟಾಯ್ ಗನ್, ವಾಕಿಟಾಕಿ ಇಟ್ಟುಕೊಂಡು ತಾನೊಬ್ಬ ಇಂಟಲಿಜೆನ್ಸಿ ಬ್ಯೂರೋ ಆಫಿಸರ್ ಎಂಬಂತೆ ಈತ ಪೋಸ್ ಕೊಟ್ಟಿದ್ನಂತೆ.
ಸದ್ಯ ಸಂಗಮೇಶನನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಯುವಕನ ಜೊತೆಗೆ ಇನ್ನೂ ಎಂಟು ಜನ ಯುವಕರಿದ್ದಾರೆಂಬ ಗುಮಾನಿ ಮೂಡಿದೆ. ಯುವಕನನ್ನು ತನಿಖೆಗೊಳಪಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


