ನ್ಯೂಯಾರ್ಕ್: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಉಕ್ರೇನ್ ಮೇಲೆ ಕ್ಷಿಪ್ರ ದಾಳಿ ನಡೆಸಲಾಗುತ್ತಿದೆ. ಉಕ್ರೇನ್ ಮದ್ದುಗುಂಡುಗಳ ತೀವ್ರ ಕೊರತೆಯನ್ನು ಹೊಂದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಉಕ್ರೇನ್ ಗೆ ಸಹಾಯ ಮಾಡಲು ಅಮೆರಿಕ ಮತ್ತೆ ಮುಂದೆ ಬಂದಿದೆ. ಅಧಿಕಾರಿಗಳ ಪ್ರಕಾರ, ಈ ಯುದ್ಧದಲ್ಲಿ ಉಕ್ರೇನ್ ಗೆ ಬೆಂಬಲವನ್ನು ನೀಡಲು ಅಮೆರಿಕ ತಯಾರಿ ನಡೆಸುತ್ತಿದೆ.
ಅಮೆರಿಕ ಈಗ ಉಕ್ರೇನ್ ಗೆ 275 ಮಿಲಿಯನ್ ಡಾಲರ್ ಗಳ ಮಿಲಿಟರಿ ನೆರವು ಪ್ಯಾಕೇಜ್ ನೀಡಲು ಸಿದ್ಧತೆ ನಡೆಸಿದೆ. ಇದರಲ್ಲಿ 155 ಎಂಎಂ ಫಿರಂಗಿ ಶೆಲ್ ಗಳು, ನಿಖರವಾದ ವಾಯು ಯುದ್ಧಸಾಮಗ್ರಿಗಳು ಮತ್ತು ವಾಹನಗಳು ಸೇರಿವೆ ಎನ್ನಲಾಗಿದೆ.
ಇತ್ತ ರಷ್ಯಾದ ಭೂ ದಾಳಿಯ ನಂತರ ಈಶಾನ್ಯ ಉಕ್ರೇನ್ ನಲ್ಲಿ ಸಾವಿರಾರು ಮಂದಿ ನಾಗರಿಕರು ಪ್ರದೇಶವನ್ನು ತೊರೆದಿದ್ದಾರೆ. ರಷ್ಯಾ ಫಿರಂಗಿ, ಪಟ್ಟಣಗಳು ಮತ್ತು ಹಳ್ಳಿಗಳನ್ನು ಗುರಿಯಾಗಿಸಿದೆ. ರಷ್ಯಾದ ಸೇನೆಯು ಗಡಿಯ ಬಹುಭಾಗದ ಮೇಲೆ ಹಿಡಿತ ಸಾಧಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


