ಪಾವಗಡ: ಶ್ರೀರಾಮಾನುಜರ ತತ್ವ-ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತುಮಕೂರು ರಾಮಾನುಜ ಪತ್ತಿನ ಸಹಕಾರ ಸಂಘದ ಮುಖ್ಯಸ್ಥ ಚೆಲುವಯ್ಯ ತಿಳಿಸಿದರು.
ತಾಲ್ಲೂಕಿನ ಮಂಗಳವಾಡ ಗ್ರಾಮದಲ್ಲಿ, ಪಾವಗಡ ತಾಲ್ಲೂಕು ವೈಷ್ಣವ ಮಹಾ ಸಭಾದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮಾನುಜಾಚಾರ್ಯರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು “ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದ ಮಹಾನ್ ಸಂತರು ರಾಮಾನುಜರು, 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಮಹಾನ್ ಪುಣ್ಯ ಪುರುಷರು. ಇಂತಹ ಮಹನೀಯರ ಜೀವನದ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ನಿರ್ದೇಶಕ ರಘುನಾಥ್ ಮಾತನಾಡಿ, “ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕಿದ ಪ್ರಥಮ ಆಚಾರ್ಯರೇ ಶ್ರೀ ರಾಮಾನುಜಾಚಾರ್ಯರು. ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ಮಹಾಮಹಿಮರು ಎಂದು ತಿಳಿಸಿದರು.
ವೈಷ್ಣವರು ಸಂಘಟನೆಯಾಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ನಾಡಿನಾದ್ಯಂತ ನಮ್ಮ ಬಂಧುಗಳು ಒಗ್ಗೂಡಿ ಸಮಾಜ ಹಾಗೂ ಸಮುದಾಯದ ಏಳ್ಗೆಗೆ ಶ್ರಮಿಸಬೇಕು ಎಂದು ಪಾವಗಡ ಸಂಘಟನಾ ಕಾರ್ಯದರ್ಶಿ ಮಂಗಳವಾಡ ಪಾಂಡು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀರಾಮಾನುಜರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ-ಕಳಶಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರು ರಾಮಾನುಜ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ರಮಾನುಜ ಪತ್ತಿನ ಸೌಹಾರ್ದ ಪತ್ತಿನ ಸಹಕಾರಿ ಭ್ಯಾಂಕ್ ನಿರ್ದೇಶಕರುಗಳಾದ ಹೆಗ್ಗೆರೆ ರವಿ, ತುಮಕೂರು ವೈಷ್ಣವ ಮಹಾಸಭಾ ನಿರ್ದೇಶಕ ದರ್ಶನ್ ದೊಡ್ಡಹಳ್ಳಿ, ಪರುಶುರಾಂಪುರ ದ ವೈಷ್ಣವ ಸಂಘದ ಅಧ್ಯಕ್ಷರಾದ ಗೋಪಾಲ್, ಕಾರ್ಯದರ್ಶಿ ಪ್ರಭಕರ್ , ಆಂದ್ರದ ಮಡಕಶಿರಾ ತಾಲ್ಲೂಕು ವೈಷ್ಣವ ಸಂಘದ ಮುಖಂಡ ಶ್ರೀನಿವಾಸ್, ಮಧುಗಿರಿ ತಾಲ್ಲೂಕು ವೈಷ್ಣವ ಸಂಘದ ನಿರ್ದೇಶಕ ಅಶ್ವತ್ ನಾರಾಯಣ, ಮಾಜಿ ಅಧ್ಯಕ್ಷ ಪೆಮ್ಮನಹಳ್ಳಿ ಶ್ರೀನಾಥ್, ಕಾರ್ಯದರ್ಶಿ ಮದ್ದೆರಾಮು, ಪುರುಷೋತ್ತಮ್, ರಾಜ್ ಕುಮಾರ್, ಮಾರುತಿ, ಲೋಕೇಶ್, ಲಕ್ಷ್ಮೀನಾರಾಯಣ, ಶ್ರೀಧರ್, ಕೇಶವಮೂರ್ತಿ ಇನ್ನಿತರ ವೈಷ್ಣವ ಮುಖಂಡರು ಪಾಲ್ಗೊಂಡಿದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


