ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಪಟ ಪಟ ಅನ್ನೋ ಪಠಾಕಿಯ ಮಾತುಗಳಿಂದ, ಮುತ್ತು ಪೋಣಿಸಿದಂತೆ ನುಡಿಯುವ ಕನ್ನಡ ನುಡಿಗಳಿಂದ, ಸ್ಪಾಟ್ ಅಲ್ಲೇ ಬರುವ ಕೌಂಟ್ರು, ಕಾಮಿಡಿಗಳಿಂದ ಕನ್ನಡಿಗರ ಮನೆ ಮಾತಾಗಿ, ಮನೆ ಮಗಳಾಗಿ ಬೆಳೆದು ನಿಂತಿದ್ದಾರೆ.
ಅನುಶ್ರೀ ವಿಚಾರದಲ್ಲಿ ಎಲ್ಲರಿಗೂ ಪ್ರೀತಿ, ವಿಶ್ವಾಸ. ಅವರು ಇನ್ನೂ ಮದುವೆ ಆಗಲಿಲ್ಲವಲ್ಲಾ ಎಂಬ ಸ್ವಲ್ಪ ಸ್ವಲ್ಪವೇ ಸಿಟ್ಟು, ಬೇಜಾರು ಹಲವರಿಗೆ ಇದೆ. ಇತ್ತೀಚೆಗಷ್ಟೆ ಕರಾವಳಿಯ ವಾಹಿನಿಯಲ್ಲಿ ಸಂದರ್ಶನ ಮಾಡುವಾಗ ಸದ್ಯದಲ್ಲೇ ಮದುವೆ ಆಗುವುದಾಗಿ ತಿಳಿಸಿದ್ದರು. ಆದರೀಗ ಈ ಬೆನ್ನಲ್ಲೇ ಅನುಶ್ರೀ ಕಂಠೀರವ ಸ್ಟುಡಿಯೋ ಒಳಗೆ ಒಬ್ಬರನ್ನು ಮುದ್ದಾಡುತ್ತಾ ಎಲ್ಲರಿಗೂ ಸಿಕ್ಕಿಬಿದ್ದಿದ್ದಾರೆ.
ಅರೇ ಮುದ್ದಾಡೋದು ಅಂದರೆ ನೀವು ಎಲ್ಲೆಲಿಗೊ ಹೋಗ ಬೇಡ್ರಪ್ಪಾ. ಅವರು ಮುದ್ದಾಡಿದ್ದು ವ್ಯಕ್ತಿಯನ್ನಲ್ಲ. ಅವರ ಪ್ರೀತಿಯ ನಾಯಿಯನ್ನು. ಹೌದು, ಅನುಶ್ರೀ ಎಂದಾಕ್ಷಣ ಆ್ಯಂಕರ್ ಎಂದು ಎಷ್ಟು ಖಚಿತವಾಗಿ ಹೇಳುತ್ತೇವೆಯೋ ಅಷ್ಟೇ ಸತ್ಯವಾಗಿಯೂ ಅವರು ಪ್ರಾಣಿಪ್ರಿಯರೂ ಹೌದು. ಅದರಲ್ಲಿಯೂ ನಾಯಿಮರಿ(Pet Dogs)ಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾಕಾಲ ನಾಯಿಮರಿಗಳನ್ನು ತಮ್ಮೊಂದಿಗೆ ಕರೆದುಕೊಂಡೇ ಓಡಾಡುತ್ತಾರೆ. ಹೀಗೆ, ಇತ್ತೀಚೆಗೆ ಕಂಠೀರವ ಸ್ಟುಡಿಯೋಗೆ ಶೂಟಿಂಗ್ ಬಂದಿದ್ದ ವೇಳೆ ಕೋಕೋ ಎಂಬ ಮುದ್ದಾದ ನಾಯಿಮರಿ ನೋಡಿ ತಮ್ಮ ಮನಸ್ಸು ಹಿಡಿದಿಡಲಾಗದೇ ಮುದ್ದಾಡಿದ್ದಾರೆ. ಅಂದರೆ, ಅವರು ಮದುವೆಗೂ ಮೊದಲು ಮುದ್ದಾಡಿದ್ದು ಬೇರಾರನ್ನೂ ಅಲ್ಲ ಒಂದು ಪುಟಾಣಿ ನಾಯಿಮರಿಯನ್ನು. ಅದರಲ್ಲಿಯೂ ನಾಯಿಮರಿಗೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


