ಕೋಲಾರ: ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಚನ್ನಗಿರಿಯ ಲಾಕಪ್ ಡೆತ್ ಸಹ ಹಲವು ರೀತಿಯ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಲಾಕಪ್ ಡೆತ್ ಮೃತನ ಪತ್ನಿ ಹೇಳಿರುವುದನ್ನ ಗಮನಿಸಿದ್ದೇನೆ. ಇಲಾಖೆಗೆ ನಾಲ್ಕುವರೆ ಲಕ್ಷ ಪ್ರತಿ ತಿಂಗಳು ಹಫ್ತಾ ಕೊಡುತ್ತಿದ್ರು. ಈ ತಿಂಗಳು ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಲಾಕಪ್ ಡೆತ್ ಆಗಿದೆ. ಸರ್ಕಾರದ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ೧೮೦ ಕೋಟಿ ದುರ್ಬಳಕೆ, ಅಕ್ರಮ ವರ್ಗಾವಣೆ ಆಗಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುವವರ ಬೆನ್ನಿಗೆ ಈ ಸರ್ಕಾರ ನಿಂತಿದೆ. ಭಿತ್ತನೆ ಬೀಜದ ಬೆಲೆ ಏರಿಕೆ, ಗೊಬ್ಬರದ ಕೊರತೆ ಇದೆ. ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ದಿಕ್ಕುಬತಪ್ಪಿಸುವ ಕೆಲಸ ನಡೆಯುತ್ತಿದೆ. ವಿರೋಧ ಪಕ್ಷಗಳು ಸೈಲಾಂಟಗಿಲ್ಲ, ಆಡಳಿತ ಪಕ್ಷವೆ ಏನೂ ಮಾಡಿಲ್ಲ ಆಡಳಿತ ಯಂತ್ರ ಕುಸಿದಿದೆ.
ಈ ಸರ್ಕಾರ ೫ ಗ್ಯಾರಂಟಿಗಳಿಗೆ ಮಾತ್ರ ಸೀಮಿತ ವಾಗಿದೆ. ಹೊರ ಗುತ್ತಿಗೆ ಆದಾರದ ಮೀಸಲಾತಿ ತರಲು ಮುಂದಾಗಿದೆ. ಶಿಕ್ಷಣ ಸಚಿವರ ಯಾಕೆ ಬೇಕು, ಶಿಕ್ಷಣ ಸಚಿವರ ಅವಶ್ಯಕತೆ ಇಲ್ಲ. ಅದರಲ್ಲೂ ಹಣ ಮಾಡುವುದು ಈ ಸರ್ಕಾರದ ಉದ್ದೇಶ. ವರುಣಾದಲ್ಲಿ ಕ್ಷೇತ್ರದ ತ್ಯಾಗ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪುತ್ರ ಕುರಿತು ಪುನರುಚ್ವರಿಸಿದ ಕುಮಾರಸ್ವಾಮಿ. ಅಂದೆ ಪ್ರಜ್ವಲ್ ಗೆ ವಾಪಸ್ ಬರುವಂತೆ ಎಚ್ಚರಿಕೆ ಕೊಟ್ಟೆ.
ಪ್ರಜ್ವಲ್ ರನ್ನ ದೇವೇಗೌಡರೆ ಕಳಿಸಿದ್ದಾರೆ ಎನ್ನುತ್ತಾರಲ್ಲ ಅದಕ್ಕೆ ಸಿಎಂ ಗೆ ಉತ್ತರ ಕೊಟ್ಟೆ. ಆದ್ರೆ ಸಿಎಂ ಸಿದ್ದರಾಮಯ್ಯ ಅವರು ನೀವೇ ಕಳುಹಿಸಿದ್ದೇವೆ ಎನ್ನುತ್ತಾರೆ. ವಿದೇಶಕ್ಕೆ ನಿಮ್ಮ ಮಗ ಹೋದಾಗ ಏನಾಯ್ತು ಅಂತ ಹೇಳ್ದೆ ಅಷ್ಟೆ. ನೀವು ದೇವೇಗೌಡರ ಬಗ್ಗೆ ಮಾತನಾಡಿದ್ದಕ್ಕೆ ಹಾಗೆ ಹೇಳಿದೆ. ಪ್ರಜ್ವಲ್ ಅತ್ಯಾಚಾರ ಮಾಡಿ ಹೋಗಿದ್ದಾನೆ ಎನ್ನುತ್ತಾರೆ ಅಲ್ಲ. ಸಿದ್ದರಾಮಯ್ಯ ಮಗ ಸಾಧುಗಳ ಜೊತೆ ವಿದೇಶಕ್ಕೆ ಹೋಗಿದ್ರಾ. ಹಾಗಾದ್ರೆ ಸಿದ್ದರಾಮಯ್ಯ ಪುತ್ರನ ಜೊತೆಗೆ ಹೋಗಿದ್ದವರೆಲ್ಲಾ ಸಾಧುಗಳಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


