ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಮತ್ತೆ ಡೀಪ್ ಫೇಕ್ ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಡೀಪ್ ಫೇಕ್ ಗೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಿದ್ದರೂ ಬುದ್ದಿ ಕಲಿಯದ ಕಿಡಿಗೇಡಿಗಳು ಮತ್ತೆ ಅದೇ ಕೆಲಸ ಮಾಡಿದ್ದಾರೆ. ಮಾಡೆಲ್ ಕಂ ಕಂಟೆಂಟ್ ಕ್ರಿಯೇಟರ್ ಡೇನಿಯಾಲ ವಿಲ್ಲಾರ್ರಿಯಲ್ ಅವರ ವಿಡಿಯೋಗೆ ರಶ್ಮಿಕಾರ ಮುಖವನ್ನು ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.
ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೋವನ್ನು ಏಪ್ರಿಲ್ 19, 2024 ರಂದು ತನ್ನ Instagram ಪ್ರೊಫೈಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅದೇ ಬಿಕಿನಿಯಲ್ಲಿರುವ ವಿಲ್ಲಾರ್ರಿಯಲ್ ಅವರ ಇತರ ಚಿತ್ರಗಳು ಮತ್ತು ವೀಡಿಯೊಗಳ ಜೊತೆಗೆ ವಿಡಿಯೋದಲ್ಲಿರುವುದು ಮೂಲ ವ್ಯಕ್ತಿಯೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ ಎನ್ನುವುದು ರಿವೀಲ್ ಆಗಿದೆ.
ವೀಡಿಯೋವನ್ನು ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಂತಹ ಪ್ಲಾಟ್ ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಪೋಸ್ಟ್ 45,000 ಕ್ಕೂ ಹೆಚ್ಚು ಇಷ್ಟಗಳನ್ನು ಮತ್ತು ಸುಮಾರು 300 ಶೇರ್‌ಗಳನ್ನು ಗಳಿಸಿದೆ. ಡೀಪ್ ಫೇಕ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ ಕರ್ನಾಟಕ ಸರಕಾರ. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ.
ಡೀಪ್ ಫೇಕ್ ನಂತರ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತೀಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


